ಯಾದಗಿರಿ (ಏ. 03): ಕೃಷ್ಣಾ ನದಿ ದಾಟುವಾಗ ಮೊಸಳೆ ದಾಳಿ ಮಾಡಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. 

ಶಹಾಪುರ ತಾಲೂಕಿನ ಐಕೂರ ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ.  ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮೇದರಾಳ ಗ್ರಾಮದಿಂದ ಐಕೂರು ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಮೊಸಳೆ ದಾಳಿ ಮಾಡಿದೆ.  ಕೃಷ್ಣಾ ನದಿ ದಾಟುವಾಗ ಏಕಾಏಕಿ ಮೊಸಳೆ ಪ್ರತ್ಯಕ್ಷವಾಗಿದೆ.  ಅಂದಾಜು ೩೫ ವರ್ಷದ ಮಹಿಳೆ ಎನ್ನಲಾಗಿದೆ. ನಾಪತ್ತೆಯಾದ ಅಪರಿಚಿತ ಮಹಿಳೆಗಾಗಿ ಹುಡುಕಾಟ ನಡೆಸಲಾಗಿದೆ. 

 ಕೃಷ್ಣಾ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಘಟನ ಸ್ಥಳಕ್ಕೆ ವಡಗೇರಾ ಪೊಲೀಸರ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.