ವಿಕಿಲೀಕ್ಸ್’ಗೆ ಮಹತ್ವದ ದಾಖಲೆಗಳು ಹೇಗೆ ಲಭ್ಯವಾದುವು? ಇದರ ಹಿಂದೆ ಸಿಬ್ಬಂದಿಯ ಕೈವಾಡವಿದೆಯೇ? ಅಥವಾ ಇತರರು ಭಾಗಿಯಾಗಿದ್ದಾರೆಯೇ? ಪ್ರಕಟಿಸಿರುವ ದಾಖಲೆಗಳ ಹೊರತಾಗಿಯೂ ಇನ್ನೂ ಹಲವು ದಾಖಲೆಗಳು ವಿಕಿಲೀಕ್ಸ್ ಬಳಿ ಇದೇಯೇ? ಮುಂತಾದವುಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವರದಿಯಾಗಿದೆ.

ವಾಷಿಂಗ್ಟನ್ (ಮಾ.09): ವಿಶ್ವದ ಅತೀ ಪ್ರಬಲ ಗುಪ್ತಚರ ಸಂಸ್ಥೆಯೆಂದೇ ಹೇಳಲಾಗುವ ಅಮೆರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ (ಸಿಐಏ)ಯ ಕಾರ್ಯಾಚರಣೆಗೆಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಿಕಿಲೀಕ್ಸ್ ಸೋರಿಕೆ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುವುದೆಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಕಿಲೀಕ್ಸ್ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್’ಬಿಐ) ಹಾಗೂ ಸಿಐಏಗಳು ಈ ಕುರಿತು ಸಮಾಲೋಚನೆ ನಡೆಸುತ್ತಿವೆಯೆಂದು ಸಿಎನ್’ಎನ್ ವರದಿ ಮಾಡಿದೆ.

ವಿಕಿಲೀಕ್ಸ್’ಗೆ ಮಹತ್ವದ ದಾಖಲೆಗಳು ಹೇಗೆ ಲಭ್ಯವಾದುವು? ಇದರ ಹಿಂದೆ ಸಿಬ್ಬಂದಿಯ ಕೈವಾಡವಿದೆಯೇ? ಅಥವಾ ಇತರರು ಭಾಗಿಯಾಗಿದ್ದಾರೆಯೇ? ಪ್ರಕಟಿಸಿರುವ ದಾಖಲೆಗಳ ಹೊರತಾಗಿಯೂ ಇನ್ನೂ ಹಲವು ದಾಖಲೆಗಳು ವಿಕಿಲೀಕ್ಸ್ ಬಳಿ ಇದೇಯೇ? ಮುಂತಾದವುಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವರದಿಯಾಗಿದೆ.

ವಿಕಿಲೀಕ್ಸ್ ಸೋರಿಕೆ ಮಾಡಿರುವ ದಾಖಲೆಗಳ ಅಧಿಕೃತತೆ ಬಗ್ಗೆಯಾಗಲಿ, ತನಿಖೆಯ ಕುರಿತಾಗಲಿ ಪ್ರತಿಕ್ರಿಯೆ ನೀಡಲು ಸಿಐಏ ವಕ್ತಾರ ರ್ಯಾನ್ ಟ್ರಿಪಾನಿ ನಿರಾಕರಿಸಿದ್ದರೆ, ಸೋರಿಕೆಯಾಗಿರುವ ಬಹುತೇಕ ದಾಖಲೆಗಳು ಅಧಿಕೃತವೆಂದೂ ಇತರ ಮೂಲಗಳು ತಿಳಿಸಿವೆಯೆನ್ನಲಾಗಿದೆ.

ಸಿಐಏ’ನ ಹ್ಯಾಕಿಂಗ್ ಕಾರ್ಯಾಚಾರಣೆ ಬಗ್ಗೆ ಮಹತ್ವದ ದಾಖಲೆಗಳನ್ನು ವಿಕಿಲೀಕ್ಸ್ ಕಳೆದ ಮಂಗಳವಾರ ಬಹಿರಂಗಡಿಸಿದ್ದು, ಗುಪ್ತಚರ ಸಂಸ್ಥೆಯ ದಾಖಲೆಗಳು ಈಗಾಗಲೇ ಸೊರಿಕೆಯಾಗಿದ್ದು ದುಷ್ಕರ್ಮಿಗಳ ಹಾಗೂ ವಿದೇಶಿ ಗೂಢಾಚರರ ಕೈಸೇರಿದೆಯೆಂದು ಹೇಳಿತ್ತು.