ಶೆಫೀಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ಬೌನ್ಸರ್ ಎದುರಿಸುತ್ತಿದ್ದ ಆಡಂ ಅವರ ತಲೆಗೆ ಚೆಂಡು ಬಲವಾಗಿ ಬಡಿದಿದೆ.

ಸಿಡ್ನಿ(ನ.17): ಸ್ಟ್ರೇಲಿಯಾದ ಬ್ಯಾಟ್ಸ್​ಮನ್ ಆಡಂ ವೋಗ್ಸ್​ ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಶೆಫೀಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ಬೌನ್ಸರ್ ಎದುರಿಸುತ್ತಿದ್ದ ಆಡಂ ಅವರ ತಲೆಗೆ ಚೆಂಡು ಬಲವಾಗಿ ಬಡಿದಿದೆ.

ತಕ್ಷಣವೇ ಕುಸಿದು ಬಿದ್ದ ವೋಗ್ಸ್​ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾಸ್ಮೇನಿಯಾ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

16 ರನ್ ಗಳಿಸಿ ಆಡುತ್ತಿದ್ದ ಆಡಂ, ವೇಗಿ ಕ್ಯಾಮರೂನ್ ಸ್ಟೆವನ್ಸನ್ ಬೌನ್ಸರ್ ಎದುರಿಸಲು ಹೋದಾಗ ಚೆಂಡು ಹೆಲ್ಮಟ್​​ಗೆ ಬಡಿದಿದೆ. 

ಪಶ್ಚಿಮ ಆಸ್ಟ್ರೇಲಿಯಾ ತಂಡದ ನಾಯಕರೂ ಆಗಿರುವ ವೋಗ್ಸ್​​ಗೆ ಮೈದಾನದಲ್ಲೇ ಚಿಕಿತ್ಸೆ ನೀಡಲಾಯ್ತು. ನಂತರ ಡ್ರೆಸ್ಸಿಂಗ್ ರೂಮ್​​​​​​ಗೆ ಕರೆದೊಯಯ್ದು, ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.