ಗಣೇಶ ಚತುರ್ಥಿ ಸಂಭ್ರಮಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ಕುಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೈದರಾಬಾದ್: ಗಣೇಶ ಚತುರ್ಥಿ ಸಂಭ್ರಮಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ಕುಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಭ್ರಮಾಚರಣೆಯಲ್ಲಿ ಜನರೆಲ್ಲಾ ತಲ್ಲೀನರಾಗಿರುವ ಸಂದರ್ಭದಲ್ಲಿ ಗುಂಪಿನ ಮಧ್ಯೆ ನುಸುಳಿ ವ್ಯಕ್ತಿಯೊಬ್ಬ ಯುವತಿ ಹಾಗೂ ಮಹಿಳೆಯರನ್ನು ಕೆಟ್ಟದಾಗಿ ಸ್ಪರ್ಶಿಸುವುದು, ಹೈದರಾಬಾದ್ ಪೊಲೀಸರು ಇಟ್ಟಿರುವ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಹೈದರಾಬಾದ್ ಪೊಲೀಸರ ಶೀ ತಂಡವು ಇಂತಹ ಜನರನ್ನು ಪತ್ತೆಹಚ್ಚಲು ಕ್ಯಾಮೆರಾಗಳನ್ನು ವಿವಿಧ ಸ್ಥಳಗಳಲ್ಲಿ ಅಳವಡಿಸಿತ್ತು.

ಈ ಕ್ಯಾಮೆರಾ ದೃಶ್ಯಾವಳಿಗಳ ಆಧಾರದಲ್ಲಿ ಸುಮಾರು 30 ವ್ಯಕ್ತಿಗಳನ್ನು ಪೊಲೀಸರು ವಶಪಡಿಸಿದ್ದು, ಅವರಲ್ಲಿ ಸುಮಾರು 8 ಮಂದಿ ಅಪ್ರಾಪ್ತರಾಗಿದ್ದಾರೆಂದು ಹೇಳಲಾಗಿದೆ.