Asianet Suvarna News Asianet Suvarna News

ಡೆಬಿಟ್, ಕ್ರೆಡಿಟ್ ಕಾರ್ಡ್ ಶೀಘ್ರ ಕಣ್ಮರೆ

ದೇಶದ ಜಿಡಿಪಿ ಶೇ.7 ದರದಲ್ಲಿ ವೃದ್ಧಿಯಾದರೆ 2032ರಷ್ಟೊತ್ತಿಗೆ ದೇಶದ ಜನತೆಯ ತಲಾ ಆದಾಯ 4 ಸಾವಿರ ಅಮೆರಿಕನ್ ಡಾಲರ್ಗೆ ಹೆಚ್ಚಳವಾಗಲಿದೆ.

Credit and debit card soon Disappearance

ಬೆಂಗಳೂರು(ಜ.8): ಮುಂದಿನ ಎರಡೂವರೆ ವರ್ಷಗಳಲ್ಲಿ ಭೀಮ್ ಮಾದರಿಯ ಬೆರಳಚ್ಚು ಆರ್ಥಿಕ ವಹಿವಾಟು ಅತಿ ಹೆಚ್ಚು ಬಳಕೆಗೆ ಬರಲಿದ್ದು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಪ್ರಮಾಣ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾ ಅಕಾರಿ ಅಮಿತಾಬ್ ಕಾಂತ್ ಹೇಳಿದರು.

14ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಮೊದಲ ದಿನವಾದ ಶನಿವಾರ ಭಾರತೀಯ ಸಮಾಜದ ಮೇಲೆ ನವೀನ ಮಾದರಿಯ ಸ್ಟಾರ್ಟ್‌ಅಪ್‌ಗಳ ಪರಿಣಾಮ ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ದೇಶದ ಜಿಡಿಪಿ ಶೇ.7ರ ದರದಲ್ಲಿ ವೃದ್ಧಿಯಾದರೆ 2032ರಷ್ಟೊತ್ತಿಗೆ ದೇಶದ ಜನತೆಯ ತಲಾ ಆದಾಯ 4 ಸಾವಿರ ಅಮೆರಿಕನ್ ಡಾಲರ್‌ಗೆ ಹೆಚ್ಚಳವಾಗಲಿದೆ. ಒಂದು ವೇಳೆ ಜಿಡಿಪಿ ದರ 10ಕ್ಕೇರಿದರೆ ತಲಾ ಆದಾಯ 7 ಸಾವಿರ ಡಾಲರ್ ತಲುಪುತ್ತದೆ. ಇದು ದೇಶದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆರ್ಥಿಕ ಪ್ರಗತಿ ಮತ್ತಷ್ಟು ವೇಗವಾಗಿ ಆಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios