Asianet Suvarna News Asianet Suvarna News

ಪೆಟ್ರೋಲ್ ಬಂಕ್ಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಸಲೀಸು: ಬಂಕ್ ಮಾಲೀಕರ ಧರಣಿ ತಾತ್ಕಾಲಿಕ ಹಿಂಪಡೆತ

ಕಡೆಗೂ ಪೆಟ್ರೋಲ್ ಮಾಲೀಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿನಿಂದ ಜಾರಿಯಾಗಬೇಕಿದ್ದ ಸರ್​ಚಾರ್ಜ್​​​ ಐದು ದಿನಗಳ ಕಾಲ ಮುಂದೂಡಿಕೆಯಾಗಿದೆ. ಮುಂದಿನ ಶುಕ್ರವಾರದ ತನಕ ಎಂಡಿಆರ್ ಶುಲ್ಕ ವಿಧಿಸದಂತೆ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

Credit And Debit Card Are Allowed In Petrol Bunks

ಬೆಂಗಳೂರು(ಜ.09): ಕಡೆಗೂ ಪೆಟ್ರೋಲ್ ಮಾಲೀಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿನಿಂದ ಜಾರಿಯಾಗಬೇಕಿದ್ದ ಸರ್​ಚಾರ್ಜ್​​​ ಐದು ದಿನಗಳ ಕಾಲ ಮುಂದೂಡಿಕೆಯಾಗಿದೆ. ಮುಂದಿನ ಶುಕ್ರವಾರದ ತನಕ ಎಂಡಿಆರ್ ಶುಲ್ಕ ವಿಧಿಸದಂತೆ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ಡಿಜಿಟಲೀಕರಣ, ಕ್ಯಾಶ್​ ಲೆಸ್​ ವ್ಯವಹಾರ. ಪ್ರಧಾನಿ ನರೇಂದ್ರ ಮೋದಿ ಬಹುದಿನದ ಕನಸು, ನೋಟ್​ಬ್ಯಾನ್ ಬಳಿಕ ಈ ವಿಚಾರದಲ್ಲಿ ಜನ ಕೂಡ ತಲೆಯಾಡಿಸುವ ಹೊತ್ತಿಗೆ ಪೆಟ್ರೋಲ್ ಬಂಕ್ ಮಾಲೀಕರು ಶಾಕ್ ನೀಡಲು ಮುಂದಾಗಿದ್ದರು. ನಿನ್ನೆ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬಂಕ್​ಗಳಲ್ಲಿ  ಡೆಬಿಟ್, ಕ್ರೆಡಿಟ್ ಕಾರ್ಡ್​ ಸ್ವೀಕರಿಸಲ್ಲ.. ಬ್ಯಾಂಕ್​ಗಳು ಸರ್​​ಚಾರ್ಜ್​ ವಿಧಿಸುತಿವೆ. ನಮ್ಮ ಜೇಬಿಂದ ಯಾಕ್ ಕಟ್ಟಬೇಕು ಅಂತ ಬಂಕ್ ಮಾಲೀಕರು ಧರಣಿಗೆ ಮುಂದಾಗಿದ್ದರು.

ಮಧ್ಯ ಪ್ರವೇಶಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​: ಪೆಟ್ರೋಲಿಯಂ ಸಚಿವರಿಂದ ಸಮಸ್ಯೆ ಬಗೆಹರಿಸುವ ಭರವಸೆ

ಯಾವಾಗ ಬೆಂಗಳೂರು ಸೇರಿ ದೇಶಾದ್ಯಂತ ಪೆಟ್ರೋಲ್ ಮಾಲೀಕರ ಧರಣಿಯ ಮಾತುಗಳು ಕೇಳ್ ಬಂತೋ, ಈಗಾಗಲೇ ದುಡ್ಡಿಲ್ಲದೆ ಪರದಾಡುತ್ತಿರುವ ಗ್ರಾಹಕರು ಕೂಡ ಕಂಗಾಲಾಗಿದ್ದರು. ಈ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್​ ಸಹೋದ್ಯೋಗಿಗಳಾದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಜೊತೆ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚಿಸಿದರು.

ಶುಕ್ರವಾರದ ತನಕ ಪ್ಲಾಸ್ಟಿಕ್ ಮನಿ ಸ್ವೀಕಾರ

ಇದರಿಂದಾಗಿ ಇದೇ ಶುಕ್ರವಾರ ಅಂದ್ರೆ 13ರ ತನಕ ಎಲ್ಲಾ ರೀತಿಯ ಕಾರ್ಡ್​ ಸ್ವೀಕರಿಸಿ. ಸರ್​ಚಾರ್ಜ್​ ವಿಧಿಸದಂತೆ ಬ್ಯಾಂಕ್​ಗಳ ಜೊತೆ ಚರ್ಚಿಸಲಾಗುತ್ತೆ ಅಂತ ಧರ್ಮೇಂದ್ರ ಪ್ರಧಾನ್​ ಬ್ಯಾಂಕ್ ಮಾಲೀಕರಿಗೆ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್​ಗಳು ಪೆಟ್ರೋಲ್ ಬಂಕ್​ಗಳಲ್ಲಿ ಸ್ವೀಕರಿಸಲಿದ್ದು ಧರಣಿ ಕೈ ಬಿಟ್ಟಿದ್ದೇವೆ ಅಂತ ಪೆಟ್ರೋಲ್​ ಬಂಕ್​ ಮಾಲೀಕರ ಸಂಘದ ಅಧ್ಯಕ್ಷ  ರವೀಂದ್ರನಾಥ್ ಸುವರ್ಣನ್ಯೂಸ್​ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಗ್ರಾಹಕನಿಗೆ ಹೊರೆಯಾದಾಗ ಸುಮ್ಮನಿದ್ದರು!

ಅಂದ ಹಾಗೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್​ಗಳ ಮೇಲಿನ ಸರ್​ ಚಾರ್ಜ್​ ಹೊಸದೇನಿಲ್ಲ. ಮೊದಲಿಂದಲೂ ಬ್ಯಾಂಕ್​'ಗಳು ಈ ಶುಲ್ಕ ವಿಧಿಸುತ್ತಿದ್ದವು. ಈ ಮೊದಲು ಗ್ರಾಹಕನಿಗೆ ಈ ಹೊರೆ ಬೀಳುತ್ತಿತ್ತು. ಇದೀಗ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರ ಉತ್ತೇಜಿಸುವ ಸಲುವಾಗಿ ಗ್ರಾಹಕನಿಗೆ ಕೃಪೆ ತೋರಿ ಪೆಟ್ರೋಲ್ ಬಂಕ್ ಮಾಲೀಕರ ಕಡೆಗೆ ಗಮನಹರಿಸಿದ್ದವು ಬ್ಯಾಂಕ್​ಗಳು. ಒಟ್ಟಿನಲ್ಲಿ ಶುಕ್ರವಾರದ ತನಕ ಪೆಟ್ರೋಲ್ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

Follow Us:
Download App:
  • android
  • ios