ನಿಪಾ ವೈರಸ್ ಎಂದರೇನು..? ಅದರ ಬಗ್ಗೆ ನೀವು ತಿಳಿದಿರಬೇಕಾದ ವಿಚಾರಗಳೇನು..? ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು.. ?ಇಲ್ಲಿದೆ ಸಂಪೂರ್ಣ ಮಾಹಿತಿ 

ನಿಪಾ ವೈರಸ್ ಎಂದರೇನು..?

ನಿಪಾ ವೈರಸ್ ಎನ್ನುವುದು ಮೊದಲ ಬಾರಿಗೆ ಹಂದಿ ಸಾಕುವ ರೈತರಲ್ಲಿ ಮಲೇಶಿಯಾದಲ್ಲಿ ಕಂಡು ಬಂತು

*ಆತಂಕಕಾರಿಯಾದ ರೋಗವೇ ?

ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅಲ್ಲದೇ ಇದಕ್ಕೆ ಯಾವುದೇ ರೀತಿಯಾದ ಸೂಕ್ತ ಔಷಧೋಪಚಾರಗಳೂ ಇಲ್ಲ.

*ಯಾರು ಹೆಚ್ಚು ಎಚ್ಚರಿಕೆಯಿಂದ ಇರಬೇಕು, ಹೇಗೆ ಹರಡುತ್ತದೆ ?

*ಹಂದಿ ತಿನ್ನುವವರು ಹಾಗೂ ಹಂದಿಗಳೊಂದಿಗೆ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು

*ಬಾವಲಿಗಳಿಂದಲೂ ಈ ರೋಗ ಹರಡುತ್ತದೆ. ಬಾವಲಿಗಳು ತಿಂದ ಹಣ್ಣನ್ನು ಸೇವಿಸುವುದು ಕೂಡ ರೋಗಕ್ಕೆ ಕಾರಣವಾಗಬಹುದು

*ಯಾರು ನಿಪಾ ವೈರಸ್ ಗೆ ತುತ್ತಾದವರು ಎಚ್ಚರಿಕೆ ವಹಿಸುವುದು ಅತ್ಯಗತ್ಯ

 ನಿಪಾ ವೈರಸ್ ತಗುಲಿದಾಗ ಕಾಣಿಸುವ ಲಕ್ಷಣಗಳೇನು..?

ಇದ್ದಕ್ಕಿದ್ದಂತೆ ಜ್ವರ ಬರುವುದು. ತಲೆನೋವು, ಮಾಂಸಖಂಡಗಳ ನೋವು, ತಲೆ ಸುತ್ತುವಿಕೆ. ವಾಂತಿ, ಬಳಿಕ ಅತಿಯಾದ ಸುಸ್ತು, ರೋಗಿ ಕೋಮಾಗೂ ತೆರಳಬಹುದು

ಚಿಕಿತ್ಸೆ ಹೇಗೆ..?

ಅತ್ಯಂತ ಸೂಕ್ಷ್ಮವಾಗಿ ರೋಗಿಯನ್ನು ನೋಡಿಕೊಳ್ಳಬೇಕು. ರೋಗಿಗಳಿಗೆ ಮಾನಸಿಕವಾಗಿ ಧೈರ್ಯವನ್ನು ತುಂಬಬೇಕು. ಮುನ್ನೆಚ್ಚರಿಕೆಯೇ ಇದಕ್ಕೆ ಮುಖ್ಯ ಔಷಧ.

ಹೇಗೆ ತಡೆಯುವುದು..?

ಹಂದಿ ಹಾಗೂ ಹಂದಿಗಳಿಂದ ದೂರವಿರುವುದು. ಸ್ವಚ್ಛತೆ ಕಾಪಾಡಿಕೊಳ್ಳುವುದು. ಕೈಗಳನ್ನು ಆಗಾಗ ತೊಳೆಯುತ್ತಿರುವುದು

ಸ್ವಚ್ಛವಾದ ಮನೆಯಲ್ಲೇ ತಯಾರಿಸಿ ಆಹಾರ ಸೇವನೆ. ಖಚ್ಚಾ ಹಣ್ಣುಗಳ ಸೇವನೆ ತಡೆಯುವುದು. 

ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್ ಧರಿಸುವುದು

ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. 

- ಡಾ. ಅರ್ಜುನ್ M.B 
RML ಆಸ್ಪತ್ರೆ ದಿಲ್ಲಿ