ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಕೆನೆ ಪದರದಡಿಯಲ್ಲಿ (creamy layer) ಬರುವ ವರ್ಗದವರ ವಾರ್ಷಿಕ ವರಮಾನವನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ (ಆ.23): ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಕೆನೆ ಪದರದಡಿಯಲ್ಲಿ (creamy layer) ಬರುವ ವರ್ಗದವರ ವಾರ್ಷಿಕ ವರಮಾನವನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಓಬಿಸಿ ಕೆಟಗರಿಯಲ್ಲಿ ಬರುವ ಕೆನೆಪದರ ವರ್ಗದವರು ವಾರ್ಷಿಕ 8 ಲಕ್ಷ ರೂ ವರಮಾನ ಹೊಂದಿದ್ದರೂ ಮೀಸಲಾತಿ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ದ್ಯೋಗಗಳಲ್ಲಿ ಓಬಿಸಿಯಲ್ಲಿ ಒಳ ವರ್ಗೀಕರಣ ಮಾಡುವ ಕುರಿತು, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಆಯೋಗ ರಚಿಸಲು ಸಿವ ಸಂಪುಟ ಇಂದು ಅನುಮೋದನೆ ನೀಡಿದೆ. ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಪಶ್ಚಿಮ ಬಂಗಾಳ ಸೇರಿದಂತೆ 11 ರಾಜ್ಯಗಳ ಸರ್ಕಾರಿ ಉದ್ಯೋಗಗಳಲ್ಲಿ ಇದು ಜಾರಿಯಲ್ಲಿದೆ. ಆದರೆ ಕೇಂದ್ರ ಸರ್ಕಾರದಲ್ಲಿ ಇದು ಜಾರಿಯಲ್ಲಿರಲಿಲ್ಲ.