ಮೋದಿ ಬಂದೊದ್ ಮೇಲೆ ಶುರುವಾಗಿದೆ ಟ್ವಿಟ್ಟರ್ ವಾರ್| ಪ್ರಧಾನಿ ಮೋದಿಯಿಂದ ಕೇರಳದ ಕೊಲ್ಲಮ್ ಬೈಪಾಸ್ ರಸ್ತೆ ಉದ್ಘಾಟನೆ| ಭಾಷಣದಲ್ಲಿ ಶಬರಿಮಲೆ ವಿವಾದ ಪ್ರಸ್ತಾಪಿಸಿದ್ದ ಮೋದಿ| ಕೇರಳ ಎಲ್‌ಡಿಎಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ| ‘ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಬಂದಿದ್ದೀರಿ ಅಷ್ಟು ಮಾಡಿ ಹೋಗಿ’| ಮನುವಾದ ಬಿಟ್ಟು ಸಂವಿಧಾನ ಓದಿ ಎಂದ ಸಿಪಿಎಂ
ತಿರುವನಂತಪುರಂ(ಜ.16): ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇರಳದ ಕೊಲ್ಲಮ್‌ನಲ್ಲಿ ಬೈಪಾಸ್ ರಸ್ತೆ ಉದ್ಘಾಟನೆ ಮಾಡಿದ್ದರು. ಈ ಮಧ್ಯೆ ಮೋದಿ ಕೇರಳ ಪ್ರವಾಸದ ಉದ್ದೇಶದ ಕುರಿತಾಗಿ ಆಡಳಿತಾರೂಢ ಸಿಪಿಎಂ ಕಿಡಿಕಾರಿದೆ.
ಕೊಲ್ಲಮ್ ಬೈಪಾಸ್ ರಸ್ತೆ ಉದ್ಘಾಟನೆ ಮಾಡಿ ಮಾತನಾಡಿದ್ದ ಪ್ರಧಾನಿ ಮೋದಿ, ಶಬರಿಮಲೆ ಕುರಿತು ಕೇರಳ ಎಲ್‌ಡಿಎಫ್ ಸರ್ಕಾರ ತೆಗೆದುಕೊಂಡಿರುವ ನಿಲುವನ್ನು ಪ್ರಶ್ನಿಸಿದ್ದರು. ಎಡಪಕ್ಷ ಸರ್ಕಾರದ ಈ ತಪ್ಪು ನಿರ್ಧಾರ ಇತಿಹಾಸದಲ್ಲಿ ದಾಖಲಾಗಲಿದೆ ಎಂದೂ ಮೋದಿ ಹರಿಹಾಯ್ದಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಪಿಎಂ, ಪ್ರಧಾನಿ ನರೇಂದ್ರ ಮೋದಿ ಮನುವಾದ ಬಿಟ್ಟು ಭಾರತದ ಸಂವಿಧಾನ ಓದಿಕೊಳ್ಳುವುದು ಒಳಿತು ಎಂದು ಹರಿಹಾಯ್ದಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿಪಿಎಂ, ಅಭಿವೃಧ್ಧಿ ಕಾಮಗಾರಿ ಉದ್ಘಾಟನೆಗೆ ಬಂದಿದ್ದ ಮೋದಿ, ಅದನ್ನು ಮಾಡುವುದು ಬಿಟ್ಟು ಶಬರಿಮಲೆ ವಿವಾದ ಕೆದಕಿದ್ದು ಅವರ ಉದ್ದೇಶವನ್ನು ಸಾರುತ್ತದೆ ಎಂದು ಸಿಪಿಎಂ ಹರಿಹಾಯ್ದಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಪಾಲಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯ. ಇದನ್ನೇ ಕೇರಳದ ಎಲ್‌ಡಿಎಫ್ ಸರ್ಕಾರ ಮಾಡುತ್ತಿರುವುದು. ಪ್ರಧಾನಿ ಮೋದಿ ಅವರಿಗೆ ಈ ಎಲ್ಲ ವಿಷಯ ಗೊತ್ತಿದೆ. ಆದರೂ ಮನುವಾದಿ ಪಕ್ಷದ ಸದಸ್ಯರಾಗಿ ಅವರು ಅದಕ್ಕೆ ತಕ್ಕಂತೆ ವರ್ತಿಸಿರುವುದು ಆಶ್ಚರ್ಯ ತಂದಿಲ್ಲ ಎಂದು ಸಿಪಿಎಂ ವ್ಯಂಗ್ಯವಾಡಿದೆ.
