. ದರೋಡೆ ಪ್ರಕರಣವನ್ನು ತಡೆಯುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್​ ಆಯುಕ್ತ ಚರಣ್​ ರೆಡ್ಡಿ ಅಮಾನತು ಆದೇಶ ಹೊರಡಿಸಿದ್ದಾರೆ

ಬೆಂಗಳೂರು(ಡಿ.7): ಪೊಲೀಸರಿಂದಲೇ 35 ಲಕ್ಷ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಸಿಪಾಳ್ಯ ಇನ್ಸ್​ಪೆಕ್ಟರ್​ ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ. ದರೋಡೆ ಪ್ರಕರಣವನ್ನು ತಡೆಯುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್​ ಆಯುಕ್ತ ಚರಣ್​ ರೆಡ್ಡಿ ಅಮಾನತು ಆದೇಶ ಹೊರಡಿಸಿದ್ದಾರೆ. ನ.22 ರಂದು ಕಲಾಸಿಪಾಳ್ಯದ ಎಸ್'ಐ ಮಲ್ಲಿಕಾರ್ಜುನ, ಪೇದೆಗಳಾದ ಮಂಜುನಾಥ್​, ಗಿರೀಶ್​, ಚಂದ್ರ ಮತ್ತು ಅನಂತ್ ರಾಜು ಅವರು 35 ಲಕ್ಷ ರೂ. ಸುಲಿಗೆ ಮಾಡಿದ್ದರು.