ಡಿಕೆಶಿ ಸಹವಾಸದಿಂದ ಸಾಕಷ್ಟು ಬೇಸತ್ತಿದ್ದೇನೆ. ಇನ್ನೇನಿದ್ದರೂ ಸೈದ್ಧಾಂತಿಕ ಹೋರಾಟ. ನಾನು ಮೌನವಾಗಿದ್ದಾಕ್ಷಣ ನನ್ನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ.

ಬೆಂಗಳೂರು(ಜ.05): ಡಿಕೆಶಿಗೆ ಪೊರಕೆಯಲ್ಲಿ ಹೊಡೆಸುವೆ ಹೇಳಿಕೆಗೆ ಬದ್ಧನಾಗಿರುತ್ತೇನೆ ಎಂದು ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ್ ಇಂಧನ ಸಚಿವರ ವಿರುದ್ಧ ಗರಂ ಆದರು.

ಸುವರ್ಣ ನ್ಯೂಸ್'ನೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಇನ್ಮುಂದೆ ಡಿಕೆಶಿ ಜೊತೆ ಯಾವುದೇ ಕಾರಣಕ್ಕೂ ಕೈಜೋಡಿಸಲ್ಲ. ಡಿಕೆಶಿ ಸಹವಾಸದಿಂದ ಸಾಕಷ್ಟು ಬೇಸತ್ತಿದ್ದೇನೆ. ಇನ್ನೇನಿದ್ದರೂ ಸೈದ್ಧಾಂತಿಕ ಹೋರಾಟ. ನಾನು ಮೌನವಾಗಿದ್ದಾಕ್ಷಣ ನನ್ನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಡಿಕೆಶಿ ಜಾತಕ ನನಗೆ ಚೆನ್ನಾಗಿ ಗೊತ್ತಿದೆ. ಯೋಗೇಶ್ವರ್ ಗೆದ್ದೇ ಗೆಲ್ತಾರೆ ಅಂತ ಡಿಕೆಶಿಗೆ ಗೊತ್ತಿದೆ. ಮಂಡ್ಯದಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ನನಗಿದೆ. ಇಂಧನ ಸಚಿವರಿಗೆ ಚನ್ನಪಟ್ಟಣದಲ್ಲಿ ಮರ್ಯಾದೆ ಇಲ್ಲ' ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಕತ್ತಿದ್ದರೆ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಗೆಲ್ಲಲಿ

ನಾನು ಮಂಡ್ಯ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿಲ್ಲ. ಡಿಕೆಶಿ ಸಹೋದರರಿಗೆ ಅಧಿಕಾರದ ಮದ. ನಾನು ಇವರ ದಾಕ್ಷಿಣ್ಯದಲ್ಲಿ ಇಲ್ಲ. ನಾನು ಅವರನ್ನು ಮಟ್ಟ ಹಾಕುತ್ತಾನೆಂಬ ಭಯ. ಚನ್ನಪಟ್ಟಣದಲ್ಲಿ ನಾನಿಲ್ಲ ಅಂದರೆ ಠೇವಣಿ ಕಳೆದುಕೊಳ್ತಾರೆ. ಚನ್ನಪಟ್ಟಣದ ಜನರಿಗೆ ಯೋಗೇಶ್ವರ್ ಮಾತ್ರ ಮುಖ್ಯ. ಡಿಕೆಶಿ ದುರಹಂಕಾರದ ಮಾತು ಆಡುತ್ತಿದ್ದಾರೆ. ಇಂಧನ ಸಚಿವರು ತಾಕತ್ತಿದ್ದರೆ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಗೆಲ್ಲಲಿ.ಅವರ ವಿರುದ್ಧ ಸಾಮಾನ್ಯ ಬಿಜೆಪಿ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿ ಸಹೋದರರಿಬ್ಬರಿಗೆ ಮಣ್ಣು ಮುಕ್ಕಿಸುವೆ' ಎಂದು ಸವಾಲು ಹಾಕಿದರು.