ಸಂಗೀತ ಕೇಳಿದರೆ ಹಸು ಜಾಸ್ತಿ ಹಾಲು ಕೊಡುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಅದೇ ರೀತಿ ಹಸುಗಳು ದಷ್ಟಪುಷ್ಠವಾಗಿ ಬೆಳೆಯಲು ಕುರಾನಿನ ಪ್ರವಚನ ಕೇಳಿಸಲು ಮಲೇಷ್ಯಾ ಮುಂದಾಗಿದೆ.

ಸಂಗೀತ ಕೇಳಿದರೆ ಹಸು ಜಾಸ್ತಿ ಹಾಲು ಕೊಡುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಅದೇ ರೀತಿ ಹಸುಗಳು ದಷ್ಟಪುಷ್ಠವಾಗಿ ಬೆಳೆಯಲು ಕುರಾನಿನ ಪ್ರವಚನ ಕೇಳಿಸಲು ಮಲೇಷ್ಯಾ ಮುಂದಾಗಿದೆ.

ಇದರಿಂದ ಹಸುಗಳು ಹೆಚ್ಚಿನ ಮಾಂಸವನ್ನು ನೀಡುತ್ತದೆ ಎಂಬ ನಂಬಿಕೆ. ಗ್ರಾಮೀಣ ಭಾಗದ ರೈತರು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಿದ್ದಾರಂತೆ. ಕುರಾನ್‌ ಪಠಣದಿಂದ ಜನರ ಮನಸ್ಸು ಶಾಂತವಾಗಿರುತ್ತದೆ.

ಅದೇ ರೀತಿ ಪ್ರಾಣಿಗಳ ಮನಸ್ಸು ಕೂಡ ಶಾಂತವಾಗಿ ಇರಲಿದ್ದು, ದಷ್ಟಪುಷ್ಠವಾಗಿ ಬೆಳೆದು ಹೆಚ್ಚಿನ ಮಾಂಸವನ್ನು ನೀಡಲಿದೆ ಎಂದು ಮಲೇಷ್ಯಾ ಕೃಷಿ ಸಚಿವ ಚೆ ಅಬ್ದುಲ್ಲಾ ಹೇಳಿದ್ದಾರೆ.

ಮಲೇಷ್ಯಾದಲ್ಲಿ ಇಸ್ಲಾಮಿಕ್‌ ಕಾನೂನು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, ಪಾಲಿಸದೇ ಇದ್ದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.