ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದರ ಮೇಲೆ ಗುಂಪೊಂದು ನಡೆಸಿದ ದಾಳಿಯಲ್ಲಿ ಓರ್ವ ಸಾವನ್ನಪ್ಪಿ, ಇತರೆ ಇಬ್ಬರು ಗಾಯಗೊಂಡ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಗೋವಿಂದ್ ಗಢ ಎಂಬಲ್ಲಿ ನಡೆದಿದೆ.
ಅಲ್ವಾರ್/ನವದೆಹಲಿ: ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದರ ಮೇಲೆ ಗುಂಪೊಂದು ನಡೆಸಿದ ದಾಳಿಯಲ್ಲಿ ಓರ್ವ ಸಾವನ್ನಪ್ಪಿ, ಇತರೆ ಇಬ್ಬರು ಗಾಯಗೊಂಡ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಗೋವಿಂದ್ ಗಢ ಎಂಬಲ್ಲಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಹತ್ಯೆ ಬಳಿಕ ಇದು ಅಪಘಾತ ಎಂದು ಬಿಂಬಿಸಲು ಶವವನ್ನು ರೈಲ್ವೆಯ ಹಳಿಯ ಮೇಲೆ ಇಡಲಾಗಿತ್ತು.
ಹೀಗಾಗಿ ಸಾವನ್ನಪ್ಪಿದ ಉಮರ್‌ನ ತಲೆ ಮತ್ತು ದೇಹದ ಕೆಲ ಭಾಗಗಳು ಛಿದ್ರವಾಗಿದೆ ಎಂದು ಆರೋಪಿಸಲಾಗಿದೆ
