ಗೋವುಗಳು ಹಿಂದುಗಳ ಪವಿತ್ರ ದೇವರೆಂದು ಪೂಜಿಸುವುದು ಸಾಮಾನ್ಯ. ಆದರೆ ‘ಕಿಶೋರಿ’ ಎಂಬ ಗೋವೊಂದು 3ನೇ ವರ್ಷಕ್ಕೆ ಕಾಲಿಡುವ ಹಿನ್ನೆಲೆಯಲ್ಲಿ 5,100 ಕೆ.ಜಿಯ ಕೇಕ್‌ ತಂದು ಡ್ಯಾನ್ಸರ್‌ಗಳು ಮತ್ತು ಜಾನಪದ ಹಾಡುಗಾರನ್ನು ಆಹ್ವಾನಿಸಿ ಸಂಭ್ರಮಾಚರಣೆ ಆಚರಿಸಿರುವ ಘಟನೆ ಹರ್ಯಾಣದ ಝಾಜ್ಜರ್‌ನ ಗೋಶಾಲೆಯಲ್ಲಿ ನಡೆದಿದೆ.

ರೋಹ್ಟಕ್‌: ಗೋವುಗಳು ಹಿಂದುಗಳ ಪವಿತ್ರ ದೇವರೆಂದು ಪೂಜಿಸುವುದು ಸಾಮಾನ್ಯ. ಆದರೆ ‘ಕಿಶೋರಿ’ ಎಂಬ ಗೋವೊಂದು 3ನೇ ವರ್ಷಕ್ಕೆ ಕಾಲಿಡುವ ಹಿನ್ನೆಲೆಯಲ್ಲಿ 5,100 ಕೆ.ಜಿಯ ಕೇಕ್‌ ತಂದು ಡ್ಯಾನ್ಸರ್‌ಗಳು ಮತ್ತು ಜಾನಪದ ಹಾಡುಗಾರನ್ನು ಆಹ್ವಾನಿಸಿ ಸಂಭ್ರಮಾಚರಣೆ ಆಚರಿಸಿರುವ ಘಟನೆ ಹರ್ಯಾಣದ ಝಾಜ್ಜರ್‌ನ ಗೋಶಾಲೆಯಲ್ಲಿ ನಡೆದಿದೆ.

ಈ ಗೋಶಾಲೆಯಲ್ಲಿ 1000ಕ್ಕೂ ಹೆಚ್ಚು ಗೋವುಗಳಿದ್ದು, ಅವುಗಳಿಗಿಂತ ಈ ಗೋವನ್ನು ವಿಶೇಷವೆಂದು ಪರಿಗಣಿಸಲಾಗುತ್ತಿದೆ.

ಕಾರಣ ಈ ಗೋವಿನ ತಾಯಿ ಗೋಶಾಲೆಗೆ ಬರುವುದಕ್ಕೂ ಮೊದಲು ಕುರುಡಾಗಿತ್ತು, ಅನಂತರದಲ್ಲಿ ಅಚಾನಕ್‌ ಆಗಿ ದೃಷ್ಠಿ ಪಡೆಯಿತು.ಆ ಗೋವಿನ ಹೊಟ್ಟೆಯಲ್ಲಿ ಜನಿಸಿದ ‘ಕಿಶೋರ್‌’ ಗೋವನ್ನು ಜನರು ಪೂಜ್ಯ ಭಾವದಿಂದ ನೋಡುತ್ತಾರೆ ಎಂದು ಗೋಶಾಲೆಯ ಮುಖ್ಯಸ್ಥ ಸುನಿಲ್‌ ನಿಮನಾ ಹೇಳಿದರು.