ಬಾಗಲಕೋಟೆಯ ಇಳಕಲ್ನ ಬಲಕುಂದಿಯಲ್ಲಿ ಲಕ್ಷಾಂತರ ಕೋಟಿಯ ಗಣಿ ಹಗರಣ ನಡೆದಿದೆ ಇದರಲ್ಲಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ಬಲಕುಂದಿಯ 600 ಎಕರೆಯ ಸರ್ಕಾರಿ ಜಮೀನಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಲಕ್ಷಾಂತರ ಕೋಟಿ ರೂಪಾಯಿಯ ಅತ್ಯಮೂಲ್ಯವಾಗಿ ರೂಬಿ ರೆಡೆ ಜೆಮ್ ಗ್ರಾನೈಟ್ ಲೂಟಿಯಾಗಿದೆ. ಇದು ಕವರ್ಸ್ಟೋರಿ ತನಿಖೆಯಲ್ಲಿ ಪತ್ತೆಯಾಗಿದೆ.
ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ರಾಜ್ಯದ ಮತ್ತೊಂದು ಭಾರೀ ಗಣಿ ಹಗರಣವನ್ನ ಬಯಲಿಗೆಳೆದಿದೆ. ಬಾಗಲಕೋಟೆಯ ಇಳಕಲ್ನಲ್ಲಿ ನಡೆದ ಲಕ್ಷಾಂತರ ಕೋಟಿ ಗಣಿ ಲೂಟಿಯ ಭಯಾನಕ ಚಿತ್ರಣವನ್ನ ನಮ್ಮ ತಂಡ ಭಾರೀ ಅಪಾಯ ಎದುರಿಸಿ ಬಹಿರಂಗಪಡಿಸಿದೆ.
ಬಾಗಲಕೋಟೆಯ ಇಳಕಲ್ನ ಬಲಕುಂದಿಯಲ್ಲಿ ಲಕ್ಷಾಂತರ ಕೋಟಿಯ ಗಣಿ ಹಗರಣ ನಡೆದಿದೆ ಇದರಲ್ಲಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ಬಲಕುಂದಿಯ 600 ಎಕರೆಯ ಸರ್ಕಾರಿ ಜಮೀನಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಲಕ್ಷಾಂತರ ಕೋಟಿ ರೂಪಾಯಿಯ ಅತ್ಯಮೂಲ್ಯವಾಗಿ ರೂಬಿ ರೆಡೆ ಜೆಮ್ ಗ್ರಾನೈಟ್ ಲೂಟಿಯಾಗಿದೆ. ಇದು ಕವರ್ಸ್ಟೋರಿ ತನಿಖೆಯಲ್ಲಿ ಪತ್ತೆಯಾಗಿದೆ.
ಗಣಿ ಇಲಾಖೆ, ಸಾರಿಗೆ ಇಲಾಖೆ, ಬಾಗಲಕೋಟೆ ಜಿಲ್ಲಾಡಳಿತ ಲಂಚ ತಿಂದು ಗಣಿ ಮಾಲೀಕರ ತಾಳಕ್ಕೆ ಕುಣಿಯೋ ಗೊಂಬೆಗಳಾಗಿದ್ದಾರೆ. ಭ್ರಷ್ಟರು ಗಣಿ ಮಾಲೀಕರ ಪರವಾಗಿ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಸರ್ಕಾರಕ್ಕೆ ಭಾರೀ ವಂಚನೆಯನ್ನೂ ಮಾಡಿದ್ದಾರೆ.ಯಾವುದೇ ಗಣಿಗಾರಿಕೆ ನಡೆಯದಿದ್ರೂ ಗಣಿಗಾರಿಕೆ ಆಗಿದೆ ಅಂತ ಅಧಿಕಾರಿ ದಾಖಲೆ ಕೊಟ್ಟಿದ್ದಾರೆ.
350 ಎಕರೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ತ್ಯಾಜ್ಯ ತುಂಬಿಸಿಟ್ಟಿರೋದು. ಅನುಮತಿಯೇ ಇಲ್ಲದೆ ಗ್ರಾನೈಟ್ ಕಟ್ಟಿಂಗ್ ಫ್ಯಾಕ್ಟರಿ ಸ್ಥಾಪಿಸಿರೋದು, ಗಣಿ ನೀತಿ, ಕಾರ್ಮಿಕ ನೀತಿಯನ್ನು ಉಲ್ಲಂಘಿಸಿರೋದು ಹೀಗೆ ಗ್ರಾನೈಟ್ ಕಂಪೆನಿಗಳು ಹೆಜ್ಜೆ ಹೆಜ್ಜೆಗೆ ಅಕ್ರಮ ಎಸಗಿವೆ. ಆದರೆ ನಮ್ಮ ರಾಜ್ಯ ಸರ್ಕಾರದ ಕಂದಾಯ, ಗಣಿ ಸಚಿವರು ಮೌನವಹಿಸಿರೋದು ಸಾಕಷ್ಟು ಅನುಮಾನ ಮೂಡಿಸಿದೆ. ಹಾಗಾಗಿ ಈ ಭಾರೀ ಹಗರಣದ ಸೂಕ್ತ ತನಿಖೆ ನಡೆಯಲೇ ಬೇಕು.
ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
--