ತುಂಬಾ ಚೀಪ್ ಮತ್ತು ಯೂಸರ್​ ಫ್ರೆಂಡ್ಲಿ ಆಗಿರೋ ಮೈದಾ ಗೋಧಿಯಿಂದಲೇ ತಯಾರಾಗುತ್ತೆ. ಆದರೆ ಈ ಮೈದಾಗೆ ಬಿಳಿ ಬಣ್ಣ ಬರಲು ಬಳಸೋ ರಾಸಾಯನಿಕ ಇದೆಯಲ್ಲಾ ಅದು ತುಂಬಾನೇ ಅಪಾಯಕಾರಿ. ಇನ್ನೊಂದು ಆತಂಕಕಾರಿ ವಿಚಾರ ಅಂದ್ರೆ ಇದೇ ಬಿಳಿ ಬಣ್ಣ ಬರಲು ನಮ್ಮ ಜೀವನದ ಒಂದು ಅಂಗವಾಗಿರೋ ಸಕ್ಕರೆಗೆ ಪ್ರಾಣಿಗಳ ಎಲುಬಿನಿಂದ ತಯಾರಾಗೋ ಇದ್ದಿಲನ್ನ ಬಳಸುತ್ತಿದ್ದಾರೆ.

ಇದೊಂದು ಈ ಆತಂಕಕಾರಿ ವಿಚಾರ. ಇದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾಗಿದೆ. ಯಾಕಂದರೆ ಇದು ನಮ್ಮ ಆರೋಗ್ಯದ ಪ್ರಶ್ನೆ. ಇದು ನಮ್ಮ ಬದುಕಿನ ಪ್ರಶ್ನೆ. ಇತ್ತೀಚಿನ ದಿನಗಳಲ್ಲಿ ಮೈದಾದ ಬಳಕೆ ವ್ಯಾಪಕವಾಗಿದೆ. ನಾವು ತಿನ್ನೋ ಪರೋಟದಿಂದ ಹಿಡಿದು, ಸಿಹಿತಿಂಡಿ, ಬೇಕರಿ ಐಟಂವರೆಗೆ ಪ್ರತಿಯೊಂದಕ್ಕೂ ಮೈದಾ ಬಳಕೆಯಾಗುತ್ತಿದೆ. ಆದರೆ ಈ ಮೈದಾ ಇವತ್ತು ಡಯಾಬಿಟೀಸ್​ ತರೋ ಮೂಲ ಪದಾರ್ಥವಾಗಿದೆ.

ತುಂಬಾ ಚೀಪ್ ಮತ್ತು ಯೂಸರ್​ ಫ್ರೆಂಡ್ಲಿ ಆಗಿರೋ ಮೈದಾ ಗೋಧಿಯಿಂದಲೇ ತಯಾರಾಗುತ್ತೆ. ಆದರೆ ಈ ಮೈದಾಗೆ ಬಿಳಿ ಬಣ್ಣ ಬರಲು ಬಳಸೋ ರಾಸಾಯನಿಕ ಇದೆಯಲ್ಲಾ ಅದು ತುಂಬಾನೇ ಅಪಾಯಕಾರಿ. ಪೊಟಾಷಿಯಂ ಬ್ರೋಮೇಟ್​ ಅನ್ನೋ ರಾಸಾಯನಿಕ ಪದಾರ್ಥ ಅತ್ಯಂತ ಪವರ್​ಫುಲ್ ಬ್ಲೀಚಿಂಗ್​ ಸಾಧನ. ಇದನ್ನ ಸಾಮಾನ್ಯವಾಗಿ ಕೂದಲಿನ ಬಣ್ಣ, ಅಥವಾ ಬಟ್ಟೆಗಳ ಬಣ್ಣವನ್ನ ಶಾಶ್ವತವಾಗಿ ಬದಲಾಯಿಸಲು ಬಳಸ್ತಾರೆ. ಇಂಥಾ ರಾಸಾಯನಿಕ ವಸ್ತುವನ್ನು ಆಹಾರಗಳಲ್ಲಿ ಬಳಸೋದನ್ನ ವಿಶ್ವಾದ್ಯಂತ ನಿಷೇಧಿಸಲಾಗಿದೆ.

ಮೈದಾಗೆ ಬಿಳಿ ಬಣ್ಣ ಬರಿಸಲು ಬಳಸೋ ಬೆನ್​ಝೈಲ್​ ಪೆರಾಕ್ಸೈಡ್​ ಮತ್ತು ಪೊಟಾಷಿಯಂ ಬ್ರೋಮೇಟ್​ ಅನ್ನೋ ರಾಸಾಯನಿಕಗಳು ಒಟ್ಟಾದಾಗ ಅಲೆಕ್ಸಾನ್ ಅನ್ನೋ ರಾಸಾಯನಿಕ ಮರು ಉತ್ಪತ್ತಿಯಾಗುತ್ತೆ. ಅದು​ ಡಯಾಬಿಟೀಸ್​ ತರೋ ಮೂಲ ವಸ್ತು ಅಂತಾರೆ ತಜ್ಜರು.

ಮಧುಮೇಹಿಗಳರಾಜಧಾನಿಯಾಗಿರುವಕೇರಳಹಾಗೂಬೆಂಗಳೂರು

ಕನಿಷ್ಟ ಪೌಷ್ಟಿಕಾಂಶ, ನಾರಿನಾಂಶವೇ ಇಲ್ಲದ, ಅಪಾಯಕಾರಿ ರಾಸಾಯನಿಕ ಹೊಂದಿರೋ ಈ ಬಿಳಿ ಮೈದಾದ ಬಳಕೆ ಹೆಚ್ಚಲು ಇನ್ನೊಂದು ಪ್ರಮುಖ ಕಾರಣ ಏನು ಗೊತ್ತಾ? ಇದು ತುಂಬಾ ಅಗ್ಗ ಹಾಗೂ ಹೆಚ್ಚು ಸಮಯ ಬಾಳಿಕೆ ಬರುತ್ತೆ. ದೇವರ ನಾಡು ಅನ್ನೋ ಖ್ಯಾತಿ ಪಡೆದಿರೋ ಕೇರಳ ಇವತ್ತು ಮಧುಮೇಹಿಗಳ ರಾಜಧಾನಿ ಅನ್ನೋ ಕುಖ್ಯಾತಿಗೂ ಪಾತ್ರವಾಗಿದೆ. ಇದಕ್ಕೆ ಮುಖ್ಯ ಕಾರಣ ಮೈದಾ. ಪರೋಟವನ್ನೇ ನೆಚ್ಚಿಕೊಂಡಿರೋ ಕೇರಳಾ ಮಂದಿಗೆ ಡಯಾಬಿಟೀಸ್​ ಶಾಶ್ವತವಾಗಿ ಕಚ್ಚಿಕೊಂಡಿದೆ.

ಬರೀ ಕೇರಳಾ ಮಾತ್ರವಲ್ಲ ನಮ್ಮ ಬೆಂಗಳೂರು ಕೂಡ ಮಧುಮೇಹಿಗಳ ರಾಜಧಾನಿಯಾಗಿ ಮಾರ್ಪಾಟ್ಟಾಗುತ್ತಿದೆ. ಇದಕ್ಕೂ ಮುಖ್ಯ ಕಾರಣ ಮೈದಾದಿಂದ ತಯಾರಾಗೋ ಬ್ರೆಡ್​, ಬನ್​, ಪಿಝಾ, ಬರ್ಗರ್​ ಮುಂತಾದ ಜಂಕ್ ಫುಡ್​ ಸೇವನೆ.

ಚಿಕ್ಕ ಮಕ್ಕಳಿಗೆ ಮೈದಾದ ತಿನಿಸುಗಳನ್ನ ತಿನ್ನಿಸುತ್ತಾ ಹೊದ್ರೆ ಬೊಜ್ಜಿನಿಂದ ಪ್ರಾರಂಭ ಆಗೋ ಸಮಸ್ಯೆ ಕೊನೆಗೆ ಹೃದಯಾಘಾತಕ್ಕೆ ಕೊನೆಯಾಗೋ ಆತಂಕವೂ ಇದೆ. ಜನರಿಗೆ ರೋಗ ಹಬ್ಬುತ್ತಿರೋ ಇಂಥಾ ವಿಷ ಆಹಾರವನ್ನು ನಿಷೇಧಿಸಲು ಸರ್ಕಾರ ಮುಂದಾಗುತ್ತಿಲ್ಲ. ಅಲ್ಲದೆ ಮೈದಾಕ್ಕೆ ಬಣ್ಣ ಬರಲು ವಿಷ ರಾಸಾಯನಿಕವನ್ನು ಬಳಸದಂತೆ ಆಹಾರ ಉತ್ಪಾದಕರಿಗೆ ಆದೇಶವನ್ನೂ ನೀಡದಿರೋದು ನಿಜವಾಗ್ಲೂ ದುರಂತವೇ ಸರಿ.

ನೋಡಿದ್ರಾ, ಬೆಳ್ಳಗಿರೋದೆಲ್ಲಾ ಹಾಲಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಯಿತು. ನಾವು ಈ ಬಿಳಿ ಬಣ್ಣದ ವ್ಯಾವೋಹಕ್ಕೆ ಬಿದ್ದು ನಮ್ಮ ಅಮೂಲ್ಯ ಜೀವನವನ್ನೇ ನರಕ ಮಾಡಿಕೊಳ್ಳುತ್ತಿದ್ದೀವಿ. ಈ ವಿಷ ಆಹಾರ ಮಾಫಿಯಾ ಕೊಡೋ ಎಂಜಲು ಕಾಸಿನ ಹಿಂದೆ ಬಿದ್ದಿರೋ ನಮ್ಮ ಸರ್ಕಾರ ಮತ್ತು ಅದರ ಆರೋಗ್ಯ ಇಲಾಖೆ ವಿಷ ತಯಾರಿಸೋ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲ್ಲ. ಅದಕ್ಕಾಗಿ ಜನರೇ ಬೀದಿಗಿಳಿದು ಈ ಮಾಫಿಯಾದ ವಿರುದ್ಧ ಹೋರಾಡ ಬೇಕಾಗಿದೆ.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್