ಇಷ್ಟು ದಿನ ನಾವು ಆಹಾರದ ಕಲಬೆರಕೆ ಕಂಡಿದ್ದೇವೆ. ಆ ಮೂಲಕ ಆಹಾರಕ್ಕೆ ವಿಷ ಸೇರಿಸೋದನ್ನ ನೋಡಿದ್ದೇವೆ. ಆದರೆ ಇದಕ್ಕಿಂತಲೂ ಆತಂಕಕಕಾರಿ ಹಾಗೂ ಅಪಾಯಕಾರಿ ಬೆಳವಣಿಗೆಯೊಂದು ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ. ರಾಜಧಾನಿಯ ಎಲ್ಲಾ ಕೆರೆ, ನದಿ, ತೊರೆಗಳು ವಿಷಮಯವಾಗಿದೆ. ಇದೇ ವಿಷ ನೀರಲ್ಲಿ ರೈತ ಬೆಳೆ ಬೆಳೆಯುತ್ತಿದ್ದಾನೆ. ಆ ಬೆಳೆ ತಿಂದ ನಮಗೆ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ.

ಬೆಂಗಳೂರಿಗರಿಗೊಂದು ಶಾಕಿಂಗ್​ ನ್ಯೂಸ್​. ರಾಜಧಾನಿ ಮಂದಿ ತಿನ್ನುತ್ತಿರೋ ಸೊಪ್ಪು, ತರಕಾರಿ ಸೇಫಲ್ಲ. ಕುಡಿತಿರೋ ಹಾಲು ಹಾಲಲ್ಲ ವಿಷ. ಅದು ಹೇಗೆ ಅನ್ನೋದನ್ನ ನಮ್ಮ ಕವರ್​ಸ್ಟೋರಿ ತಂಡ ಸಾಕ್ಷಿ ಸಮೇತವಾಗಿ ಪತ್ತೆ ಹಚ್ಚಿದೆ.

ಇಷ್ಟು ದಿನ ನಾವು ಆಹಾರದ ಕಲಬೆರಕೆ ಕಂಡಿದ್ದೇವೆ. ಆ ಮೂಲಕ ಆಹಾರಕ್ಕೆ ವಿಷ ಸೇರಿಸೋದನ್ನ ನೋಡಿದ್ದೇವೆ. ಆದರೆ ಇದಕ್ಕಿಂತಲೂ ಆತಂಕಕಕಾರಿ ಹಾಗೂ ಅಪಾಯಕಾರಿ ಬೆಳವಣಿಗೆಯೊಂದು ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ. ರಾಜಧಾನಿಯ ಎಲ್ಲಾ ಕೆರೆ, ನದಿ, ತೊರೆಗಳು ವಿಷಮಯವಾಗಿದೆ. ಇದೇ ವಿಷ ನೀರಲ್ಲಿ ರೈತ ಬೆಳೆ ಬೆಳೆಯುತ್ತಿದ್ದಾನೆ. ಆ ಬೆಳೆ ತಿಂದ ನಮಗೆ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ.

ಅಷ್ಟು ಮಾತ್ರವಲ್ಲ ತ್ಯಾಜ್ಯ ನೀರಿನಿಂದ ಬೆಳೆಯೋ ಸೊಪ್ಪು ತರಕಾರಿ ತಿಂದ್ರೆ ಮೈಯಲ್ಲಿ ಹುಳ ಸೇರೋ ಕಾಯಿಲೆಯೂ ಕಾಡಬಹುದು. ವರ್ತೂರು ಕೆರೆ, ಪಿನಾಕಿನಿ ನದಿ ಸುತ್ತ ಕಣ್ಣು ಹಾಯಿಸಿದ್ರೆ ಬರೀ ಕೊಳಕು ನೀರಿನ ಕೃಷಿಯೇ ಕಾಣಿಸಿತು. ಈ ನೀರಿನಲ್ಲಿ ಬೆಳದ ಬೆಳೆ ಮಾರುಕಟ್ಟೆಗೆ ಬಂದು ನಮ್ಮ ಮನೆಗಳ ಅಡುಗೆ ಮನೆ ಸೇರುತ್ತಿದೆ.

ರಾಜಧಾನಿಯ ಸುತ್ತಮುತ್ತಲು ಸಾವಿರಾರು ಎಕರೆ ಭೂಮಿಯಲ್ಲಿ ಇದೇ ಅಪಾಯಕಾರಿ ರಾಸಾಯನಿಕಯುಕ್ತ ನೀರಿನಿಂದ ಕೃಷಿ ಮಾಡ್ತಿದ್ದಾರೆ. ಇಲ್ಲೇ ಬೆಳೆದಿರೋ ಹುಲ್ಲು ನೀರನ್ನು ದನಕರುಗಳು ಸೇವಿಸುತ್ತಿವೆ. ಇದು ನಮ್ಮ ಆಹಾರವನ್ನೇ ವಿಷಮಯವಾಗಿಸಿದೆ. ಇಂಥಾ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದ್ರೂ ನಮ್ಮ ಸರ್ಕಾರ ಕ್ಯಾರೇ ಅನ್ನುತ್ತಿಲ್ಲ. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಸತ್ತೇ ಹೋಗಿರೋದ್ರಿಂದ ಇವತ್ತು ನಮ್ಮ ಅನ್ನದ ಬಟ್ಟಲು ವಿಷಮಯವಾಗಿದೆ.

ವರದಿ: ರಂಜಿತ್​ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​