Asianet Suvarna News Asianet Suvarna News

ಅಂತರ್ಜಾತಿ ವಿವಾಹ: ಮೊಮ್ಮಗಳನ್ನು ಕೊಂದ ತಾತನಿಗೆ ಜೀವಾವಧಿ ಶಿಕ್ಷೆ

ವೀರೇಶ್ ಮತ್ತು ನಾಗರತ್ನ ಇಬ್ಬರು ಪರಸ್ಪರ ಪ್ರೀತಿಸಿ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಅಗಿದ್ದರು. ಇದನ್ನು ವಿರೋಧಿಸಿದ ನಾಗರತ್ನಳಾ ತಂದೆ ಮಂಜುನಾಥ್ ತನ್ನ ಮಾರ್ಯಾದೆ ಹೋಯಿತು ಎಂದು ಮಗಳ ಮೇಲೆ ಕೆಂಡ ಕಾರುತ್ತಿದ್ದ.

Court punish life term Grand Father For Kill Granddaughtor

ಚಿತ್ರದುರ್ಗ(ಫೆ.16): ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮಗಳ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ತಾತನಿಗೆ ಚಿತ್ರದುರ್ಗದ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ.

ಕಳೆದ ಎರಡು ವರ್ಷಗಳ ಹಿಂದೆ ವೃದ್ಧ ಮಂಜುನಾಥ್ ಮೊಮ್ಮಗಳು ಸೃಷ್ಟಿಯನ್ನು ಚಳ್ಳಕೆರೆಯ ಅಂಬೆಡ್ಕರ್ ನಗರದ ಮನೆಯಲ್ಲಿ ವಯರ್ ಬಿಗಿದು ಕೊಲೆ ಮಾಡಿದ್ದ.ಚಿತ್ರದುರ್ಗದ ಚಳ್ಳಕೆರೆ ಪಟ್ಟಣದ ಅಂಬೇಡ್ಕರ್ ಬಡಾವಣೆಯ ವೀರೇಶ್ ಮತ್ತು ನಾಗರತ್ನ ಇಬ್ಬರು ಪರಸ್ಪರ ಪ್ರೀತಿಸಿ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಅಗಿದ್ದರು. ಇದನ್ನು ವಿರೋಧಿಸಿದ ನಾಗರತ್ನಳಾ ತಂದೆ ಮಂಜುನಾಥ್ ತನ್ನ ಮಾರ್ಯಾದೆ ಹೋಯಿತು ಎಂದು ಮಗಳ ಮೇಲೆ ಕೆಂಡ ಕಾರುತ್ತಿದ್ದ.

ಸಮಯ ಕಳೆದಂತೆ ನಾಗರತ್ನಳಿಗೆ ಸೃಷ್ಟಿ ಎನ್ನುವ ಹೆಣ್ಣು ಜನಿಸಿದೆ. ಇದೇ ಸಮಯವನ್ನು ಕಾಯುತ್ತಿದ್ದ ಮಂಜುನಾಥ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿನ ಕತ್ತಿಗೆಗೆ ವಯರ್ ಬಿಗಿದು ಕೊಲೆ ಮಾಡಿದ್ದ. ಮಂಜುನಾಥ್ ಮೇಲೆ ಚಳ್ಳಕೆರೆ ಪೋಲಿಸರು ಪ್ರಕರಣ ದಾಖಲಿಸಿದ್ದರು. ಅಂದಿನ ಪ್ರಕರಣದ ತೀರ್ಪು ಇಂದು ಜೀವಾವಧಿ ಶಿಕ್ಷೆಯಾಗಿ ಹೊರ ಬಿದ್ದಿದೆ.

ಇದರ ಮಧ್ಯೆ ಸೃಷ್ಟಿ ತಂದೆ ವಿರೇಶ್ ಅನಾರೋಗ್ಯ ಹಾಗೂ ಮಗುವಿನ ಕೊಲೆಯ ಕೊರಗಿನಿಂದ ಮೃತನಾಗಿದ್ದಾನೆ. ಇತ್ತ ನಾಗರತ್ನ ಗಂಡನನ್ನು ಕಳೆದುಕೊಂಡು ಮತವನ್ನು ಕಳೆದುಕೊಂಡು ಒಬ್ಬೊಂಟಿ ಜೀವನ‌ ನಡೆಸುತ್ತಿದ್ದಾಳೆ. ಅದರೆ ಇಂದಿನ ತೀರ್ಪು ತಂದೆಯ ವಿರುದ್ಧ ಅಗಿದ್ದು ಬೇಸರ ತಂದಿದ್ದರೂ ಮಗಳ ಕೊಲೆಗೆ ನ್ಯಾಯ ಸಿಕ್ಕಿದೆ ಎಂಬ ಸಮಾಧಾನ ಇದೆ ಎನ್ನುತ್ತಾಳೆ ನಾಗರತ್ನ.

Follow Us:
Download App:
  • android
  • ios