ಕಲಬುರಗಿ ತಾಲೂಕಿನ ಪಾಳಾ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಬಡ ರೈತ ಪುರು ರಾಠೋಡ ಅವರಿಗೆ ಸೇರಿದ ಎರಡು ಎಕರೆ 38 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು.
ಕಲಬುರಗಿ (ಜ.18): ಊರಿಗೆ ಕೆರೆ ನಿರ್ಮಿಸಲು ತನ್ನ ಸ್ವಂತ ಜಮೀನು ನೀಡಿದ ರೈತನಿಗೆ ಹತ್ತು ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ.
ನ್ಯಾಯಾಲಯ ಮೊರೆ ಹೋದ ರೈತನಿಗೆ ಜಿಲ್ಲಾಧಿಕಾರಿ ಕಚೇರಿ ಜಪ್ತಿಗೆ ಆದೇಶ ಸಿಕ್ಕಿತ್ತು.
ಆದರೆ ವಕೀಲರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿಗೆ ತೆರಳಿದ ರೈತನಿಗೆ ಡಿ.ಸಿ.ಯವರು ಮತ್ತೊಂದು ವಾರ ಸಮಯಾವಕಾಶ ಕೇಳಿದ್ದಾರೆ.
ಕಲಬುರಗಿ ತಾಲೂಕಿನ ಪಾಳಾ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಬಡ ರೈತ ಪುರು ರಾಠೋಡ ಅವರಿಗೆ ಸೇರಿದ ಎರಡು ಎಕರೆ 38 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು.
ಆದರೆ ಅವರಿಗೆ ಬರಬೇಕಿದ್ದ ಹಣದಲ್ಲಿ ನಾಲ್ಕು ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿತ್ತು. ಕಳೆದ ಹತ್ತು ವರ್ಷಗಳಿಂದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ರೈತ ಹೋರಾಟ ನಡೆಸುತ್ತಿದ್ದಾರೆ.