ನವದೆಹಲಿ [ಸೆ.20]:  ಶಿವಕುಮಾರ್‌ ಪರ ವಕೀಲರು ಮನೆಯೂಟ ಸೇರಿ ಇನ್ನಿತರ ಕೆಲ ಸೌಲಭ್ಯಗಳಿಗೆ ಸಂಬಂಧಿಸಿ ನ್ಯಾಯಾಲಯದ ಅನುಮತಿಯನ್ನು ಇನ್ನೂ ಪಡೆದಿಲ್ಲ. ಆದ್ದರಿಂದ ಡಿ.ಕೆ. ಶಿವಕುಮಾರ್‌ ಅವರ ಮಧ್ಯಾಹ್ನ ಮತ್ತು ರಾತ್ರಿಯ ಭೋಜನವು ರೋಟಿ, ಪಲ್ಯ, ದಾಲ್, ಅನ್ನ ಮತ್ತು ತರಕಾರಿಗಷ್ಟೆಸೀಮಿತವಾಗಿರಲಿದೆ. 

ಬೆಳಗ್ಗೆ 8ರೊಳಗೆ ಉಪಾಹಾರ ಇರಲಿದ್ದು ಬಿಸ್ಕೆಟ್ ಅಥವಾ ಬ್ರೆಡ್‌ ಮತ್ತು ಚಹಾ ಇರಲಿದೆ. ಒಂದು ವೇಳೆ ಮನೆಯೂಟಕ್ಕೆ ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿ, ಆ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಿದರೆ ಡಿ.ಕೆ. ಶಿವಕುಮಾರ್‌ ಅವರಿಗೆ ಮನೆಯೂಟ ಲಭಿಸಬಹುದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿ ತಿಹಾರ್‌ ಜೈಲಿನಲ್ಲಿರುವ ಚಿದಂಬರಂ ಅವರಿಗೆ ದೆಹಲಿ ಹೈ ಕೋರ್ಟ್‌ ಮನೆಯೂಟಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಅಗಸ್ಟಾವೆಸ್ಟ್‌ ಲ್ಯಾಂಡ್‌ ಪ್ರಕರಣಕ್ಕೆ ಸಂಬಂಧಿಸಿ ತಿಹಾರ್‌ ಜೈಲಿನಲ್ಲಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ಅವರ ಸಂಬಂಧಿ ರತುಲ… ಪುರಿ ಅವರಿಗೆ ಮನೆಯೂಟಕ್ಕೆ ದೆಹಲಿ ನ್ಯಾಯಾಲಯ ಅವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸಾಮಾನ್ಯವಾಗಿ ನಿಗದಿತ ಕ್ಯಾಲೊರಿ ಪ್ರಮಾಣದಲ್ಲಿ ಜೈಲೂಟವನ್ನು ಸಿದ್ಧಪಡಿಸಲಾಗುತ್ತದೆ.