ಹಗರಣದಲ್ಲಿ ಆರೋಪಿಗಳಾದ ಮಾಜಿ ವಾಯುಪಡೆ ಮುಖ್ಯಸ್ಥ ಎಸ್.ಪಿ. ತ್ಯಾಗಿ, ಸಂಜೀವ್, ಹಾಗೂ ದೆಹಲಿ ವಕೀಲ ಗೌತಮ್ ಖೈತಾನ್ ಪೊಲೀಸ್ ಕಸ್ಟಡಿಯನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ ಪಟಿಯಾಲ ಕೋರ್ಟ್, ಆರೋಪಿಗಳ ಕಸ್ಟಡಿಯನ್ನು 3 ದಿನಗಳವೆರೆಗೆ ವಿಸ್ತರಿಸಿದೆ.
ನವದೆಹಲಿ (ಡಿ.14): ಅಗಸ್ಟಾ ವೆಸ್ಟ್’ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಸ್ಥಳೀಯ ನ್ಯಾಯಾಲಯವು ಇನ್ನೂ ಮೂರು ದಿನಗಳವೆರೆಗೆ ವಿಸ್ತರಿಸಿದೆ.
ಹಗರಣದಲ್ಲಿ ಆರೋಪಿಗಳಾದ ಮಾಜಿ ವಾಯುಪಡೆ ಮುಖ್ಯಸ್ಥ ಎಸ್.ಪಿ. ತ್ಯಾಗಿ, ಸಂಜೀವ್, ಹಾಗೂ ದೆಹಲಿ ವಕೀಲ ಗೌತಮ್ ಖೈತಾನ್ ಪೊಲೀಸ್ ಕಸ್ಟಡಿಯನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ ಪಟಿಯಾಲ ಕೋರ್ಟ್, ಆರೋಪಿಗಳ ಕಸ್ಟಡಿಯನ್ನು 3 ದಿನಗಳವೆರೆಗೆ ವಿಸ್ತರಿಸಿದೆ.
ಅಗಸ್ಟಾ ಕಂಪನಿಯ ಹಿರಿಯ ಅಧಿಕಾರಿಗಳನ್ನು ತಮ್ಮ ನಿವಾಸದಲ್ಲೇ ಭೇಟಿಯಾಗಿ ಎಸ್.ಪಿ.ತ್ಯಾಗಿ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಸಿಬಿಐ ವಕೀಲರು ವಾದಿಸಿದ್ದಾರೆ.