ಇಮ್ರಾನ್ ಖಾನ್ ಹಾಗೂ ಧರ್ಮಗುರು ತಾಹಿರುಲ್ ಖಾದ್ರಿ ಅವರನ್ನು ನ.17ರೊಳಗೆ ಬಂಧಿಸುವಂತೆ ಪಾಕ್ ಉಗ್ರ ನಿಗ್ರಹ ಕೋರ್ಟ್ ಆದೇಶಿಸಿದೆ.
ಇಸ್ಲಾಮಾಬಾದ್(ಅ.21): ಪಾಕಿಸ್ತಾನದಲ್ಲಿ 2014ರ ಪ್ರತಿಭಟನೆ ವೇಳೆ ಟೆಲಿವಿಷನ್‌ನ ಪ್ರಧಾನ ಕಚೇರಿ ಮೇಲೆ ನಡೆದ ದಾಳಿ ಪ್ರಕರಣ ಸಂಬಂಧ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಹಾಗೂ ಧರ್ಮಗುರು ತಾಹಿರುಲ್ ಖಾದ್ರಿ ಅವರನ್ನು ನ.17ರೊಳಗೆ ಬಂಧಿಸುವಂತೆ ಪಾಕ್ ಉಗ್ರ ನಿಗ್ರಹ ಕೋರ್ಟ್ ಆದೇಶಿಸಿದೆ. ಪ್ರಧಾನಿ ನವಾಜ್ ಷರೀಫ್ ಅವರ 3 ಮಕ್ಕಳು ಕೋಟ್ಯಂತರ ವೌಲ್ಯದ ಆಸ್ತಿ ಹೊಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಖಾನ್ ಹಾಗೂ ಖಾದ್ರಿ ನ.2ರಂದು ಇಸ್ಲಾಮಾಬಾದ್ ಬಂದ್ ಮಾಡಲು ಉದ್ದೇಶಿಸಿರುವ ಬೆನ್ನಲ್ಲೇ ಕೋರ್ಟ್ ಈ ಆದೇಶ ಹೊರಡಿಸಿದೆ. 68 ಮಂದಿಯನ್ನು ಬಂಸುವಂತೆ ಆದೇಶಿಸಿದ್ದರೂ ಏಕೆ ಬಂಸಿಲ್ಲ ಎಂದು ನ್ಯಾ. ಕೌಸರ್ ಅಬ್ಬಾಸ್ ಜೈದಿ ಪ್ರಶ್ನಿಸಿದ್ದರು.
