ಪೋಲೀಸ್ ಇಲಾಖೆಯಲ್ಲಿ ಸಾಹಸ ಮೆರೆದ ಸಿಬ್ಬಂದಿಗೆ ಇಲಾಖೆಯಿಂದಲೇ ಗೌರವಿಸಲಾಗುತ್ತದೆ. ಪ್ರಶಸ್ತಿ ಪತ್ರದ ಜೊತೆಗೆ ಚೆಕ್ ಕೂಡ ನೀಡುತ್ತಾರೆ. ಆದರೆ ಚೆಕ್ ಕೊಡುವುದು ಕೇವಲ ಹೆಸರಿಗಷ್ಟೇನಾ ಎಂಬ ಅನುಮಾನ ಶುರುವಾಗಿದೆ. ಯಾಕಂತೀರಾ ಇಲ್ಲಿದೆ ವಿವರ

ಕಾರವಾರ(ಜೂ.20): ಪೋಲೀಸ್ ಇಲಾಖೆಯಲ್ಲಿ ಸಾಹಸ ಮೆರೆದ ಸಿಬ್ಬಂದಿಗೆ ಇಲಾಖೆಯಿಂದಲೇ ಗೌರವಿಸಲಾಗುತ್ತದೆ. ಪ್ರಶಸ್ತಿ ಪತ್ರದ ಜೊತೆಗೆ ಚೆಕ್ ಕೂಡ ನೀಡುತ್ತಾರೆ. ಆದರೆ ಚೆಕ್ ಕೊಡುವುದು ಕೇವಲ ಹೆಸರಿಗಷ್ಟೇನಾ ಎಂಬ ಅನುಮಾನ ಶುರುವಾಗಿದೆ. ಯಾಕಂತೀರಾ ಇಲ್ಲಿದೆ ವಿವರ

ಕಾನ್ಸ್'ಟೇಬಲ್ ರಮೇಶ್ ಗೌಡ ಅಂಕೋಲಾದ ಉದ್ಯಮಿ ಆರ್ ಎನ್ ನಾಯಕ್ ಅವರ ಅಂಗರಕ್ಷಕರಾಗಿ ಕೆಲಸ ಮಾಡಿದವರು. 2013ರ ಡಿಸೆಂಬರ್ 21 ರಂದು ದುಷ್ಕರ್ಮಿಗಳು ಎನ್ ಆರ್ ನಾಯಕ್ ಅವರನ್ನು ಅಂಕೋಲಾದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದರು. ಈ ವೇಳೆ ಅಂಗರಕ್ಷಕನಾಗಿದ್ದ ರಮೇಶ್, ಓರ್ವ ದುಷ್ಕರ್ಮಿಯನ್ನು ಕೊಂದಿದ್ದರು. ಇದನ್ನು ಮೆಚ್ಚಿ ಅಂದಿನ ಡಿಜಿ 1ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಅಲ್ಲದೇ 2015ರಲ್ಲಿ ಪ್ರಶಸ್ತಿಯನ್ನೂ ನೀಡಿದ್ದರು. ಆದರೆ ಚೆಕ್ ವಿತರಿಸಿ ಎರಡು ವರ್ಷ ಕಳೆದರೂ ಹಣ ರಮೇಶ್ ಗೌಡ ಅಕೌಂಟ್‌'ಗೆ ಬಿದ್ದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನೂ ಬಹುದೊಡ್ಡ ಯಡವಟ್ಟು ಅಂದರೆ ಪ್ರಶಸ್ತಿ ಪತ್ರದ ಜೊತೆ ನೀಡಿರುವ ದಾಖಲೆಯಲ್ಲಿ ಹಣ ನೀಡಲಾಗಿದೆ ಅಂತಾ ಹೇಳಲಾಗಿದೆ. ಇಲಾಖೆಯ ಈ ಯಡವಟ್ಟಿಗೆ ಪೇದೆ ಪರದಾಡುವಂತಾಗಿದೆ. ನಿಷ್ಠಾವಂತ ಪೋಲೀಸರಿಗೆ ಆರ್ಥಿಕ ಸಹಾಯ ನೀಡಬೇಕಿದ್ದ ಪೋಲೀಸ್ ಇಲಾಖೆ ಇನ್ನೂ ಹಣವನ್ನು ಅಕೌಂಟ್'ಗೆ ಹಾಕದೇ ಇರುವುದು ವಿಪರ್ಯಾಸವೇ ಸರಿ. ಕೇವಲ ಹೆಸರಿಗಷ್ಟೇ ಮಾತ್ರ ಚೆಕ್ ನೀಡುವುದಾ ಎನ್ನುವ ಅನುಮಾನ ಕಾಡುತ್ತಿದೆ.