ಮಗಳ ಕೊಲೆಗೆ ತಂದೆಯಿಂದಲೇ ಸುಪಾರಿ..? ಪ್ರೇಮಿಸಿದ್ದೇ ತಪ್ಪಾಯ್ತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 11:40 AM IST
Couples Get Death Threat In Mysuru
Highlights

ಪ್ರೀತಿಸಿ ವಿವಾಹವಾಗಿದ್ದಕ್ಕೆ ಪ್ರೇಮಿಗಳಿಗೆ ಇದೀಗ ಜೀವ ಬೆದರಿಕೆ ಒಡ್ಡಲಾಗಿದೆ. ಅಲ್ಲದೇ ಯುವತಿಯ ತಂದೆಯೇ ಕೊಲ್ಲಲು ಸುಪಾರಿ ನೀಡಿದ ಆರೋಪ ಎದುರಾಗಿದೆ.

ಮೈಸೂರು :  8 ವರ್ಷ ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜೀವ ಬೆದರಿಕೆ ಒಡ್ಡಲಾಗಿದ್ದು, ಇದೀಗ ತಂದೆಯ ಮೇಲೆಯೇ ಸ್ವಂತ ಮಗಳನ್ನು ಕೊಲ್ಲಲು ಸುಪಾರಿ ಕೊಟ್ಟ ಆರೋಪ ಎದುರಾಗಿದೆ. ಪ್ರತಾಪ್ ಹಾಗೂ ಪೂಜ ಎಂಬ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ಪೂಜಾಳ ತಂದೆ ಸುರೇಶ್ ಕುಮಾರ್ ಇಬ್ಬರನ್ನು ಕೊಲ್ಲಲು ನಿಂತಿದ್ದಾರೆ ಎಂದು ಆರೋಪಿಸಲಾಗಿದೆ.  

ಪೂಜಾ ತಂದೆ ಸುರೇಶ್ ಕೇರಳದಿಂದ ರೌಡಿಗಳನ್ನು ಕರೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ತಮ್ಮ ಸ್ವಂತ ಗ್ರಾಮಕ್ಕೆ ಹೋಗಲು ಹೆದರಿ ಇದೀಗ ಈ ಪ್ರೇಮಿಗಳು ಸಹಾಯ ಕೋರುತ್ತಿದ್ದಾರೆ.  ಗ್ರಾಮದವರು ಸಹಾಯ ಮಾಡಿ ಎಂದು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.  

ತಮಗೆ ಸಹಾಯ ಸಿಗದಿದ್ದಲ್ಲಿ ಬೆದರಿಸುತ್ತಿರುವವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ.  ಜುಲೈ 4 ರಂದು ಮನೆ ಬಿಟ್ಟು ಬಂದಿದ್ದ ಪ್ರೇಮಿಗಳನ್ನು ಬಳಿಕ ಪೋಷಕರು ದೂರ ಮಾಡಿದ್ದರು. ಪೂಜಾಳನ್ನು ಕರೆದೊಯ್ದು ಸೆರೆಯಲ್ಲಿ ಇರಿಸಲಾಗಿತ್ತು. ಬಳಿಕ ಪ್ರತಾಪ್ ಪೂಜಾಳನ್ನು ರಕ್ಷಿಸಿ ಕರೆ ತಂದಿದ್ದ.  ಇದೀಗ ಮತ್ತೆ ಪ್ರೇಮಿಗಳಿಗೆ ಜೀವ ಬೆದರಿಕೆ ಒಡ್ಡಲಾಗಿದ್ದು ಈ ನಿಟ್ಟಿನಲ್ಲಿ ಸಹಾಯ ಕೋರುತ್ತಿದ್ದಾರೆ.

loader