ಫಸ್ಟ್‌ನೈಟ್ ಶೂಟ್‌ಗೆ ವಿಡಿಯೋಗ್ರಾಫರ್ ಬೇಕಾಗಿದ್ದಾರೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 4:43 PM IST
Couple looking for videographer to film their wedding sex tape
Highlights

ಈ ಯುವ ಜೋಡಿಗಳಿಗೆ ಅದು ಏನೇನು ಆಸೆಗಳಿರುತ್ತವೆಯೋ...ಇಲ್ಲೊಂದು ಜೋಡಿ ಮದುವೆಗೆ ವಿಡಿಯೋಗ್ರಾಫರ್ ಸಿಗದೆ ತಮ್ಮ ಸಂಬಂಧವನ್ನು ಮುಂದೂಡಿಕೊಂಡೆ ಬಂದಿದೆ. ಇನ್ನು ಅವರ ಮದುವೆಗೆ ಮುಹೂರ್ತ ಕೂಡಿ ಬಂದಲ್ಲ. ಇದೇನು ಸರಳ ಮದುವೆಗೆ ವಿಡಿಯೋಗ್ರಾಫರ್ ಇಲ್ಲವೆ? ಎಂದು ಅಂದುಕೊಂಡರೆ ನಿಮ್ಮ ತಿಳಿವಳಿಕೆ ತಪ್ಪು.ಏನಪ್ಪಾ ಸುದ್ದಿ ಅಂತೀರಾ ಸರಿಯಾಗಿ ಓದಿ...

ಸೆಪ್ಟೆಂಬರ್ ನಲ್ಲಿ ಮದುವೆಯಾಗಲು ತಯಾರಿ ನಡೆಸಿರುವ ಜೋಡಿಗೆ ತಮ್ಮ ಮೊದಲ ರಾತ್ರಿಯನ್ನು ಸ್ಮರಣೀಯವಾಗಿ ಸೆರೆ ಹಿಡಿಯುವ ವಿಡಿಯೋಗ್ರಾಫರ್ ಬೇಕಾಗಿದ್ದಾನಂತೆ! ಸರಿಯಾಗಿ ವಿಡಿಯೋ ಸೆರೆ ಹಿಡಿಯುವಾತನಿಗೆ 2 ಸಾವಿರ ಪೌಂಡ್ ಸಹ ನೀಡಲಾಗುತ್ತದೆ.

2016 ರಿಂದಲೂ ಈ ಜೋಡಿ ಮದುವೆಯಾಗಬೇಕು ಎಂದು ಕಾಯುತ್ತಲೆ ಬಂದಿದೆ. ಆದರೆ ಇವರ ಮೊದಲ ರಾತ್ರಿಯನ್ನು ಸೆರೆಹಿಡಿಯುವ ವಿಡಿಯೋಗ್ರಾಫರ್ ಸಿಕ್ಕಿಲ್ಲ. ವಿಡಿಯೋಗ್ರಾಫರ್ ಬೇಕು,, ರಾತ್ರಿ ೨ ಗಂಟೆಯಿಂದ ೩ ಗಂಟೆ ಅವಧಿಯಲ್ಲಿ ಆತ ಕಾರ್ಯನಿರ್ವಹಿಸಿದರೆ ಸಾಕು. 2 ಸಾವಿರ ಪೌಂಡ್ ಅಂದರೆ 1.79 ಲಕ್ಷ ರೂ. ನೀಡಲಾಗುತ್ತದೆ ಎಂದು ಸ್ಥಳೀಯ ವೆಬ್ ತಾಣವೊಂದಕ್ಕೆ ಜಾಹೀರಾತನ್ನು ಜೋಡಿ ನೀಡಿದೆ.

ಸೆಪ್ಟೆಂಬರ್ ನಲ್ಲಿ ಮದುವೆಗೆ ತಯಾರಿ ಮಾಡಿಕೊಂಡಿರುವ ಜೋಡಿಯ ವಿಚಿತ್ರ ಜೋಡಿಯ ಮೊದಲ ರಾತ್ರಿ ಸೆರೆಹಿಡಿಯುವ ಭೂಪ ಅದು ಎಲ್ಲಿದ್ದಾನೋ? ಅಷ್ಟಕ್ಕೂ ಪ್ರೋಫೇಷನಲ್ ವಿಡಿಯೋ ಗ್ರಾಫರ್ ಬೇಕು ಅಂತಾನೆ ಜೋಡಿ ಹೇಳಿದೆ!

loader