ಮದುವೆ ಅಂದ್ರೆ ಅಲ್ಲಿ ನೂರಾರು ಜನ. ಸಂಭ್ರಮದ ವಾತಾವರಣ. ಅತಿಥಿಗಳಿಗೆ ಪ್ರೀತಿಯ ಆಹ್ವಾನ. ಆದರೆ ಈ ಮದುವೆ ಒಂಥರಾ ವಿಭಿನ್ನ. ಮದುವೆಗೆ ಬರುವ ಅತಿಥಿಗಳ ಆಹ್ವಾನದಿಂದ ಹಿಡಿದು ಇಡೀ ಮದುವೆಯೇ ವಿಶಿಷ್ಟವಾಗಿತ್ತು.

ಬೀದರ್(ಜು.04): ಮದುವೆ ಅಂದ್ರೆ ಅಲ್ಲಿ ನೂರಾರು ಜನ. ಸಂಭ್ರಮದ ವಾತಾವರಣ. ಅತಿಥಿಗಳಿಗೆ ಪ್ರೀತಿಯ ಆಹ್ವಾನ. ಆದರೆ ಈ ಮದುವೆ ಒಂಥರಾ ವಿಭಿನ್ನ. ಮದುವೆಗೆ ಬರುವ ಅತಿಥಿಗಳ ಆಹ್ವಾನದಿಂದ ಹಿಡಿದು ಇಡೀ ಮದುವೆಯೇ ವಿಶಿಷ್ಟವಾಗಿತ್ತು.

ಬೀದರ್ ನ ಶ್ರೀ ಪಂಕ್ಷನ್ ಹಾಲ್'ನಲ್ಲಿ ಶಿವರಾಜ್ ಜಮಾದಾರ ಹಾಗೂ ಸವಿತಾ ಎಂಬ ನವ ಜೋಡಿ ಹೊಸ ದಾಂಪತ್ಯಕ್ಕೆ ಕಾಲಿಟ್ಟಿತು. ಆದ್ರೆ ಈ ವಿವಾಹ ಒಂಥರಾ ವಿಶಿಷ್ಟವಾಗಿತ್ತು. ಯಾಕಂದ್ರೆ ಮಧು ಮಕ್ಕಳು ಮದುವೆಗೆ ಆಗಮಿಸಿದ್ದ ಅತಿಥಿಗಳಿಗೆ ಹೆಲ್ಮೆಟ್ ಉಡುಗೊರೆ ನೀಡಿ ಹೆಲ್ಮೆಟ್ ಬಳಸಿ, ಪ್ರಾಣ ಉಳಿಸಿಕೊಳ್ಳಿ ಎಂದು ಹೇಳುವ ಮೂಲಕ ಸಾಮಾಜಿಕ ಕಳಕಳಿ ಮೆರೆದ್ರು. ಜೊತೆಗೆ ಒಂದೊಂದು ಸಸಿ ನೀಡಿ ಮರ ಬೆಳೆಸಿ, ನಾಡು ಉಳಿಸಿ ಎಂಬ ಸಂದೇಶ ನೀಡಿ ತಮ್ಮ ಮದುವೆಯನ್ನು ಅರ್ಥಪೂರ್ಣವಾಗಿಸಿದರು.

ನವ ದಂಪತಿಯ ಈ ಕಾರ್ಯಕ್ಕೆ ಮದುವೆಗೆ ಆಗಮಿಸಿದ್ದ ಅತಿಥಿಗಳು ಶ್ಲಾಘನೆ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ನವ ವಧು - ವರರ ಈ ಪರಿಸರ ಕಾಳಜಿ, ಹಾಗೂ ಸಾಮಾಜಿಕ ಸಂದೇಶ ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.