ನವ ಜೋಡಿಯೊಂದು ಮೂಢನಂಬಿಕೆಯನ್ನು ತೊಡೆಯುವ ಪ್ರಯತ್ನವಾಗಿ ಗ್ರಹಣದ ಸಮಯದಲ್ಲೇ ಹೊಸ ಬಾಳಿಗೆ ಕಾಲಿಟ್ಟಿದೆ.
ಚಿತ್ರದುರ್ಗ : ಗ್ರಹಣವೆನ್ನುವುದು ಕೆಡಿಕಿನ ಸಮಯ ಎನ್ನುವ ಮೂಢನಂಬಿಕೆಯನ್ನು ಇಲ್ಲೊಂದು ಜೋಡಿ ತೊಡೆದು ಹಾಕಿದೆ.
ಖಾಗ್ರಾಸ ಚಂದ್ರಗ್ರಹಣದ ವೇಳೆಯೇ ಹೊಸಬಾಳಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದಲ್ಲಿ ಈ ವಿವಾಹ ನಡೆದಿದೆ.
ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ವಿವಾಹವಾಗುವ ಮೂಲಕ ಹೊಸ ಬಾಳಿಕೆ ಕಾಲಿರಿಸಿದ್ದಾರೆ. ಚಿತ್ರದುರ್ಗ ಮುರುಘಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರ ಸಭಾಂಗಣದಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ.
ಚಿತ್ರದುರ್ಗದ ಮುರುಘ ಮಠದ ಡಾ. ಮುರುಘ ಶರಣರ ಸಾನಿದ್ಯದಲ್ಲಿ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಈ ಮೂಲಕ ಮೂಢ ನಂಬಿಕೆಯ ತೊಡೆಯುವ ಪ್ರಯತ್ನ ಮಾಡಿದ್ದಾರೆ.
