ನವದೆಹಲಿ[ಮೇ.13]: ದೆಹಲಿ ಹೊರವಲಯದ ಗ್ರೇಟರ್‌ನೋಯ್ಡಾದಲ್ಲಿ ಐಪಿಎಸ್‌ ಅಧಿಕಾರಿಗೆ ಸೇರಿದ ಮನೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ ಭರ್ಜರಿ 1000 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ ನಡೆಸಿದ ವೇಳೆ 1818 ಕೆಜಿ ತೂಕದ ಸೂಡೋಎಪಿಡ್ರಿನ್‌ ಪತ್ತೆಯಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ವಶಪಡಿಸಿಕೊಳ್ಳಲಾದ ಅತಿದೊಡ್ಡ ಪ್ರಮಾಣದ ಸೂಡೋಎಪಿಡ್ರಿನ್‌ ಎಂದು ಮಾದಕವಸುತ್ರ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಕುರಿತ ಪ್ರಾಥಮಿಕ ವರದಿಯಲ್ಲಿ ಇಷ್ಟುದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳು ಇದ್ದ ಬಗ್ಗೆ ಮಾಹಿತಿ ಇರಲಿಲ್ಲ. ತನಿಖೆ ಹಂತದಲ್ಲಿ ಇವೆಲ್ಲವೂ ಬಯಲಿಗೆ ಬಂದಿವೆ. ಪ್ರಕರಣ ಸಂಬಂಧ ನೈಜೀರಿಯಾ ಮೂಲದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.