ಗೌರಿ ಲಂಕೇಶ್  ಹತ್ಯೆ ನಂತರ ವಿಜಯಪುರದಲ್ಲಿ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಪ್ರಮುಖ ಕಂಟ್ರಿ ಪಿಸ್ತುಲ್ ಜಾಲ ಪತ್ತೆಯಾಗಿದೆ. ಇನ್ನೂ ಕಂಟ್ರಿ ಪಿಸ್ತುಲ್ ಮಾರಾಟ ಮಾಡುತ್ತಿದ್ದ 12 ಜನರ ಬಂಧಿಸಲಾಗಿದೆ.

ಬೆಂಗಳೂರು (ಅ.16): ಗೌರಿ ಲಂಕೇಶ್ ಹತ್ಯೆ ನಂತರ ವಿಜಯಪುರದಲ್ಲಿ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಪ್ರಮುಖ ಕಂಟ್ರಿ ಪಿಸ್ತುಲ್ ಜಾಲ ಪತ್ತೆಯಾಗಿದೆ. ಇನ್ನೂ ಕಂಟ್ರಿ ಪಿಸ್ತುಲ್ ಮಾರಾಟ ಮಾಡುತ್ತಿದ್ದ 12 ಜನರ ಬಂಧಿಸಲಾಗಿದೆ. 20 ಕಂಟ್ರಿ ಪಿಸ್ತುಲ್, 49 ಜೀವಂತ ಗುಂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ತಾಫ್ ವಾಲಿಕಾರ್ , ಕೈಲಾಶ ದೇಖುನ್, ಗೌಡಪ್ಪ ಕೊಕಟನೂರ್ , ಸೋಮಣ್ಣ ಅಗಸರ್ , ಗುರುಬಸಪ್ಪ ದೊಡ್ಡಗಾಣಿಗೇರ , ಗಣಪತಿ ವೀರಶಟ್ಟಿ, ಗೌಸ್ ಸುತಾರ್, ಹೈದರ್ ಜಾಲಗೇರಿ, ಗೈಬುಸಾಬ್, ಚಾಂದಪೀರ್, ಹುಸೇನ್ ಪಟೇಲ್, ಸಮೀರ ಯರಗಲ್ ಬಂಧಿತ ಬಂಧಿತರು.

ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತುಲ್ ಗಳು ಸಪ್ಲೈ ಆಗುತ್ತಿದ್ದ ವು. ಮಧ್ಯ ಪ್ರದೇಶದ ಧಾರ ಜಿಲ್ಲೆಗೆ ತೆರಳಿ ಎಎಸ್ಪಿ ಶಿವಕುಮಾರ್ ಗುಣಾರಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.