ರಾಜಧಾನಿಯ ಬಡವರ ಹಸಿವು ನೀಗಿಸುವ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ ಮೇಲೆ ಸೂಕ್ತ ನಿಗಾ ಇಡದೇ ಹೋದರೆ ಭಾರೀ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಕ್ಯಾಂಟೀನ್ ಮೂಲಕ ಜನರಿಗೆ ನೀಡುತ್ತಿರುವ ಆಹಾರದ ಲೆಕ್ಕ ತೋರಿಸಲು ಗುತ್ತಿಗೆದಾರರಿಗೆ ಯಾವುದೇ ಕಟ್ಟುನಿಟ್ಟಿನ ಮಾನದಂಡ ಬಿಬಿಎಂಪಿ ರೂಪಿಸಿಲ್ಲ. ಹೀಗಾಗಿ, ನಿಗದಿತ ಸಂಖ್ಯೆಯ ಜನರಿಗಿಂತ ಕಡಿಮೆ ಆಹಾರ ಪೂರೈಸಿ ಭ್ರಷ್ಟಾಚಾರ ನಡೆಸಲು ಈ ವ್ಯವಸ್ಥೆಯಲ್ಲಿ ಸಾಕಷ್ಟು ಅವ ಕಾಶಗಳಿವೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು(ಆ.19): ರಾಜಧಾನಿಯ ಬಡವರ ಹಸಿವು ನೀಗಿಸುವ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ ಮೇಲೆ ಸೂಕ್ತ ನಿಗಾ ಇಡದೇ ಹೋದರೆ ಭಾರೀ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಕ್ಯಾಂಟೀನ್ ಮೂಲಕ ಜನರಿಗೆ ನೀಡುತ್ತಿರುವ ಆಹಾರದ ಲೆಕ್ಕ ತೋರಿಸಲು ಗುತ್ತಿಗೆದಾರರಿಗೆ ಯಾವುದೇ ಕಟ್ಟುನಿಟ್ಟಿನ ಮಾನದಂಡ ಬಿಬಿಎಂಪಿ ರೂಪಿಸಿಲ್ಲ. ಹೀಗಾಗಿ, ನಿಗದಿತ ಸಂಖ್ಯೆಯ ಜನರಿಗಿಂತ ಕಡಿಮೆ ಆಹಾರ ಪೂರೈಸಿ ಭ್ರಷ್ಟಾಚಾರ ನಡೆಸಲು ಈ ವ್ಯವಸ್ಥೆಯಲ್ಲಿ ಸಾಕಷ್ಟು ಅವ ಕಾಶಗಳಿವೆ ಎಂದು ಹೇಳಲಾಗುತ್ತಿದೆ.

ಒಬ್ಬ ವ್ಯಕ್ತಿಗೆ ಎಷ್ಟು ಪ್ರಮಾಣದ ತಿಂಡಿ, ಊಟ ನೀಡಲಾಗುತ್ತದೆ ಎಂಬ ಬಗ್ಗೆಯಾಗಲಿ ಅಥವಾ ನಿರ್ದಿಷ್ಟ ಪ್ರಮಾಣದ ಸಂಖ್ಯೆಯ ಜನರಿಗೆ ಊಟ, ತಿಂಡಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಯಾವುದೇ ಕ್ರಮಗಳಿಲ್ಲ. ಆದರೆ, ಪ್ರತಿ ದಿನ ಮೂರು ಹೊತ್ತಿನಲ್ಲಿ ಪ್ರತಿ ಕ್ಯಾಂಟೀನ್ನಲ್ಲಿ 900 ಜನರಿಗೆ ಬೆಳಗ್ಗೆ 5 ರು.ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ತಲಾ 10 ರು.ಗೆ ಊಟ ನೀಡಲಾಗುತ್ತಿದೆ. ಅಂದರೆ, ಫಲಾನುಭವಿಯಿಂದ ದಿನವೊಂದಕ್ಕೆ 25 ರು. ಪಡೆಯಲಾಗುತ್ತದೆ. ಇದಕ್ಕೆ ಸರ್ಕಾರ 32 ರು. ಅನ್ನು ಗುತ್ತಿಗೆದಾರನಿಗೆ ನೀಡುತ್ತದೆ. ಒಟ್ಟು 57 ರು. ಆಗುತ್ತದೆ. ಆದರೆ, ಗುತ್ತಿಗೆ ದಾರ ನಿತ್ಯ 900 ಜನರ ಬದಲು ಆರು ನೂರು, ಏಳು ನೂರು ಜನರಿಗೆ ಮಾತ್ರ ಊಟ ನೀಡಿ ಉಳಿದದ್ದು ಸುಳ್ಳು ಲೆಕ್ಕ ತೋರಿಸಲು ಅವಕಾಶವಿದೆ.

ಇದರ ಮೇಲೆ ನಿಗಾವಹಿಸುವ ವ್ಯವಸ್ಥೆಯಿಲ್ಲ. ಹೀಗಾಗಿ ಈ ಯೋಜನೆ ಮೂಲಕ ದೊಡ್ಡ ಭ್ರಷ್ಟಾಚಾರ ನಡೆಸಲು ಅವಕಾಶವಿದೆ ಎಂಬುದು ಆರೋಪ. ಇದಕ್ಕೆ ಪೂರಕವಾಗಿ ಗುತ್ತಿಗೆದಾರರು ನಿಜಕ್ಕೂ ಎಷ್ಟು ಆಹಾರ ಪೂರೈಸುತ್ತಾರೆ ಎಂಬುದನ್ನು ಪತ್ತೆ ಮಾಡುವ ಸಮರ್ಪಕ ವ್ಯವಸ್ಥೆಯನ್ನು ಬಿಬಿಎಂಪಿ ಹೊಂದಿಲ್ಲದಿ ರುವುದು ಆರೋಪ ಮಾಡುತ್ತಿರುವವರ ಧ್ವನಿ ಗಟ್ಟಿಯಾಗಲು ಕಾರಣವಾಗಿದೆ. 'ಈ ಬಗ್ಗೆ ಪ್ರಶ್ನಿಸಿದಾಗ ಬಿಬಿಎಂಪಿ ಅಧಿಕಾರಿಗಳು, ಅಡುಗೆ ತಯಾರಿಸುವ ತಾಣದಿಂದ ಕ್ಯಾಂಟೀನ್'ಗೆ ಆಹಾರ ಪೂರೈಕೆ ಮಾಡುವ ಸ್ಥಳದಲ್ಲಿ ಪ್ರತಿ ವ್ಯಕ್ತಿಗೆ 250 ಗ್ರಾಂ ಲೆಕ್ಕದಂತೆ 900 ಜನರಿಗೆ ಎಷ್ಟು ಗ್ರಾಂ ಆಹಾರವನ್ನು ಪೂರೈಸಲಾಗುತ್ತದೆ ಎಂಬದನ್ನು ಲೆಕ್ಕವಿಡಲಾಗುತ್ತದೆ. 900 ಕೂಪನ್ ನೀಡಿಯೇ ಅದಕ್ಕೆ ಸಮನಾದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ, ಆಹಾರ ಪೂರೈಕೆ ಸ್ಥಳದಲ್ಲಿ ಮಾತ್ರ ತೂಕ ಹಾಕಲಾಗುತ್ತದೆ. ಕ್ಯಾಂಟೀನ್'ಗೆ ಈ ಆಹಾರ ತಲುಪಿದಾಗ ಅಲ್ಲಿ ತೂಕ ಹಾಕುವ, ಸಿಬ್ಬಂದಿ ನಿರ್ದಿಷ್ಟ ಸಂಖ್ಯೆಯ ಗ್ರಾಹಕರಿಗೆ ಸಮರ್ಪಕವಾಗಿ ಆಹಾರ ಪೂರೈಸಿದರೆ ಎಂಬುದನ್ನು ಪತ್ತೆ ಮಾಡುವ ವ್ಯವಸ್ಥೆಯಿಲ್ಲ ಎಂದು ಟೀಕಾಕಾರರು ಹೇಳುತ್ತಾರೆ