ಗಾಂಧಿನಗರದಲ್ಲಿ ಶೇ.75 ರಷ್ಟು ಕಾಮಗಾರಿಗಳನ್ನ ಚಂದ್ರಪ್ಪ ಒಬ್ಬನೇ ನಿರ್ವಹಿಸಿದ್ದಾನೆ. ಈತನ ಅಕ್ರಮಗಳಿಗೆ ಪರೋಕ್ಷವಾಗಿ ದಿನೇಶ್ ಗುಂಡೂರಾವ್ ಕುಮ್ಮಕ್ಕು ನೀಡುತ್ತಿದ್ದಾರೆ

ಗುತ್ತಿಗೆದಾರ ಚಂದ್ರಪ್ಪ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗೂಂಡುರಾವ್ ಬಿಬಿಎಂಪಿ ಹಾಗೂ ಬಿಡಿಎ ಕಾಮಗಾರಿಗಳಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ನೇರಾ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ದಾಖಲೆಗಳನ್ನ ಬಿಡುಗಡೆ ಮಾತನಾಡಿದ ಅವರು, ಗಾಂಧಿನಗರ ಹಾಗೂ ಚಾಮರಾಜಪೇಟೆಯಲ್ಲಿ ಕಾಮಗಾರಿಗಳನ್ನು ನಡೆಸದೇ ಕೋಟ್ಯಂತರ ರೂಪಾಯಿ ಹಣವನ್ನು ಗುಳಂ ಮಾಡಿದ್ದಾರೆ. ದಿನೇಶ್ ಗುಂಡೂರಾವ್ ಶಾಸಕರಾದ ನಂತರ ಗಾಂಧಿನಗರದಲ್ಲಿ ಶೇ.75 ರಷ್ಟು ಕಾಮಗಾರಿಗಳನ್ನ ಚಂದ್ರಪ್ಪ ಒಬ್ಬನೇ ನಿರ್ವಹಿಸಿದ್ದಾನೆ. ಈತನ ಅಕ್ರಮಗಳಿಗೆ ಪರೋಕ್ಷವಾಗಿ ದಿನೇಶ್ ಗುಂಡೂರಾವ್ ಕುಮ್ಮಕ್ಕು ನೀಡುತ್ತಿದ್ದಾರೆ. ಆಲ್ಲದೆ ಚಂದ್ರಪ್ಪ ಗುತ್ತಿಗೆದಾರರ ಪಟ್ಟಿಯಲ್ಲಿ ಕಪ್ಪು ಪಟ್ಟಿಗೆ ಸೇರಿಸಿದ್ದರೂ,ಇಂದಿಗೂ ಆತನೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾನೆ. ಚಂದ್ರಪ್ಪ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ಈಗಾಗಲೇ ಲೋಕಾಯುಕ್ತ ಹಾಗೂ ಎಸಿಬಿಯಲ್ಲಿ ದೂರು ದಾಖಲಾಗಿದೆ.