ಸಚಿವರನ್ನು ಕಾರಿಂದ ಇಳಿಯಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದರು

ವಿಜಯಪುರ (ಡಿ.27): ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರಿಗೆ ಪಾಲಿಕೆ ಆವರಣದಲ್ಲೇ ಮುತ್ತಿಗೆ ಹಾಕಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಸಚಿವರು ಆಗಮಿಸುತ್ತಿದ್ದಂತೆ ಮುತ್ತಿಗೆ ಹಾಕಲಾಯ್ತು. ಪಾಲಿಕೆ ಕಾಂಗ್ರೆಸ್​ ಸದಸ್ಯ ಮೈನೂದ್ದಿನ್​ ಬೀಳಗಿ ಹಾಗೂ ಆತನ ಬೆಂಬಲಿಗರು, ಸಚಿವರನ್ನು ಕಾರಿಂದ ಇಳಿಯಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಅಂಗಡಿಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡದೆ ಬೇರೆಯವರಿಗೆ ಹಂಚಿಕೆ ಮಾಡಿರುವ ಆಯುಕ್ತ ಹರ್ಷ ಶೆಟ್ಟಿ ಅವ್ರನ್ನು ಅಮಾನತು ಮಾಡಬೇಕೆಂದು ಪಟ್ಟುಹಿಡಿದರು. ಬಳಿಕ ಪಾಲಿಕೆ ಆವರಣದಲ್ಲೇ ಪ್ರತಿಭಟನೆ ಕೂಡಾ ನಡೆಸಲಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರ ಜೊತೆಯೂ ಮಾತಿನ ಚಕಮಕಿ ನಡೀತು.