ಪೊಲೀಸ್ ಅಂದರೆ ಕಳ್ಳರನ್ನು ಹಿಡಿಯುವುದು, ರೌಡಿಗಳ ಹೆಡೆ ಮುರಿಕಟ್ಟಿ ಜೈಲಿಗೆ ಅಟ್ಟುವುದು ಅಷ್ಟೇ ಅಲ್ಲಾ , ಸಮಾಜದ ಸಮಸ್ಯಗಳನ್ನು ಪರಿಹರಿಸುವಲ್ಲಿ ಸಹ ಭಾಗಿಯಾಗುತ್ತಾರೆ ಎನ್ನುವುದು ಇವರೆ ಬೆಸ್ಟ್ . ಅದು ಯಾರಪ್ಪ ಎಂದು ಕೇಳುತ್ತೀರಾ ಆ ಪೊಲೀಸ್ ಅಧಿಕಾರಿ ಬಗ್ಗೆ ಯಾರು? ಇಲ್ಲಿದೆ ವಿವರ.
ರಾಯಚೂರು(ಜ.12): ಪೊಲೀಸ್ ಅಂದರೆ ಕಳ್ಳರನ್ನು ಹಿಡಿಯುವುದು, ರೌಡಿಗಳ ಹೆಡೆ ಮುರಿಕಟ್ಟಿ ಜೈಲಿಗೆ ಅಟ್ಟುವುದು ಅಷ್ಟೇ ಅಲ್ಲಾ , ಸಮಾಜದ ಸಮಸ್ಯಗಳನ್ನು ಪರಿಹರಿಸುವಲ್ಲಿ ಸಹ ಭಾಗಿಯಾಗುತ್ತಾರೆ ಎನ್ನುವುದು ಇವರೆ ಬೆಸ್ಟ್ . ಅದು ಯಾರಪ್ಪ ಎಂದು ಕೇಳುತ್ತೀರಾ ಆ ಪೊಲೀಸ್ ಅಧಿಕಾರಿ ಬಗ್ಗೆ ಯಾರು? ಇಲ್ಲಿದೆ ವಿವರ.
ರಸ್ತೆ ತುಂಬಾ ಗುಂಡಿಗಳೇ, ರಾಯಚೂರಿನ ಅಂಬೇಡ್ಕರ್ ವೃತ್ತದಿಂದ ಸ್ಟೇಷನ್ ವೃತ್ತದವರೆಗಿನ ಈ ರಸ್ತೆಯಲ್ಲಿ ರಸ್ತೆಯ ಉದ್ದಕ್ಕೂ ಗುಂಡಿಗಳು. ರಸ್ತೆ ದುರಸ್ಥಿಗೆ ನಗರಸಭೆ ಅಧಿಕಾರಿಗಳಿಗೆ ಎಷ್ಟೂ ಬಾರಿ ಹೇಳಿದರೂ ಕ್ಯಾರೆ ಎಂದಿಲ್ಲ. ಇದರಿಂದ ಬೇಸತ್ತ ಪೊಲೀಸ್ ಅಧಿಕಾರಿಯೇ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ.ಎಲ್ ಅಗ್ನಿ ತಾವೆ ಸ್ವತಃ ನಿಂತು ರಸ್ತೆಯ ಗುಂಡಿಗಳನ್ನು ಸರಿಪಡಿಸುವ ಕಾರ್ಯಕ್ಕಿಳಿದಿದ್ದಾರೆ.
ಹೋಟೆಲ್'ಗಳಿಗೆ ಪೈಪ್'ಲೈನ್ ಅಳವಡಿಸಲು ರಸ್ತೆ ಅಗೆಯಲು ಪರವಾನಿಗೆ ಕೊಟ್ಟ ಅಧಿಕಾರಿಗಳು ನಂತರ ಗುಂಡಿ ಮುಚ್ಚಿಸಿದ್ದಾರಾ ಎನ್ನುವ ಬಗ್ಗೆ ವಿಚಾರಿಸಿಲ್ಲ. ಪರಿಣಾಮ ಈ ರೀತಿ ಗುಂಡಿಗಳು ಬಿದ್ದಿವೆ, ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿಯೇ ಪೊಲೀಸ್ ಅಧಿಕಾರಿಯೇ ಜನರ ಪ್ರಾಣ ಉಳಿಸಲು ಕೆಲಸಕ್ಕೆ ಮುಂದಾಗಿದ್ದಾರೆ.
ಪೊಲೀಸ್ ಅಧಿಕಾರಿಯ ಈ ಸಾಮಾಜಿಕ ಕಳಕಳಿ ಶ್ಲಾಘನೀಯ. ನಗರಸಭೆ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಇನ್ನಾದರೂ ರಸ್ತೆ ದುರಸ್ಥಿಗೆ ಮುಂದಾಗಬೇಕಿದೆ.
