ಸುಭಾಷ್‌ ನಾಲ್ವರನ್ನು ಮನೆಗೆ ಕಳುಹಿಸಿ ನನ್ನನ್ನು ಅಪಹರಣ ಮಾಡಿ ಶಾಸಕ ಮೇಟಿ ವಿರುದ್ಧ ಹೇಳಿಕೆ ಪಡೆದುಕೊಂಡಿದ್ದರು. ಅಲ್ಲದೆ, ನನ್ನ ಮೇಲೆ ಹಲ್ಲೆ ಕೂಡ ಮಾಡ​ಲಾಗಿತ್ತು ಎಂದಿದ್ದ ವಿಜಯಲಕ್ಷ್ಮಿ, ಇಲ್ಲಿನ ನವನಗರ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.

ಬಾಗಲಕೋಟೆ(ಡಿ.31): ಮಾಜಿ ಸಚಿವ ಎಚ್‌.ವೈ. ಮೇಟಿ ಲೈಂಗಿಕ ಹಗ​ರಣ ಪ್ರಕರ ಣದ ಸಂತ್ರಸ್ತೆ ವಿಜಯಲಕ್ಷ್ಮಿ ಸರೂರ್‌ ನೀಡಿರುವ ದೂರಿನಲ್ಲಿನ ಮೊದಲ ಆ ರೋಪಿ ಡಿಎಆರ್‌ ಪೇದೆ ಸುಭಾಷ್‌ ಮುಗಳಖೋಡ ರನ್ನು ಸೇವೆಯಿಂದ ಎಸ್ಪಿ ಎಂ.ಎನ್‌. ನಾಗರಾಜ್‌ ಅಮಾನತು ಮಾಡಿದ್ದಾರೆ.
ಸುಭಾಷ್‌ ನಾಲ್ವರನ್ನು ಮನೆಗೆ ಕಳುಹಿಸಿ ನನ್ನನ್ನು ಅಪಹರಣ ಮಾಡಿ ಶಾಸಕ ಮೇಟಿ ವಿರುದ್ಧ ಹೇಳಿಕೆ ಪಡೆದುಕೊಂಡಿದ್ದರು. ಅಲ್ಲದೆ, ನನ್ನ ಮೇಲೆ ಹಲ್ಲೆ ಕೂಡ ಮಾಡ​ಲಾಗಿತ್ತು ಎಂದಿದ್ದ ವಿಜಯಲಕ್ಷ್ಮಿ, ಇಲ್ಲಿನ ನವನಗರ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು. ಈ ದೂರಿನಲ್ಲಿ ಪೇದೆ ಸುಭಾಷ್‌ ಮೊದಲ ಆರೋಪಿ. ಅಂದಿನಿಂ​ದಲೇ ಪೊಲೀಸರು ಸುಭಾಷ್‌ಗಾಗಿ ಬಲೆ ಬೀಸಿದ್ದರು. ಆದರೆ, ಸುಭಾಷ್‌ ಈವರೆಗೂ ತಲೆಮರೆಸಿಕೊಂಡಿದ್ದಾರೆ. ಸಿಐಡಿ ತನಿಖೆ ನಡೆ​ಯುತ್ತಿದ್ದರೂ ಸುಭಾಷ್‌ ಇನ್ನೂ ಪತ್ತೆ​ಯಾಗಿಲ್ಲ. ಹೀಗಾಗಿಯೇ ಸದ್ಯ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಆ.19ರಿಂದ ಸುಭಾಷ್‌ ಅನಾರೋಗ್ಯದ ನಿಮಿತ್ತ ರಜೆ ಮೇಲೆ ತೆರಳಿದ್ದರು. ಈವ​ರೆಗೂ ಸೇವೆಗೆ ಹಾಜರಾಗಿಲ್ಲ. ಅನಧಿಕೃತ​ವಾಗಿ ಗೈರು ಹಾಜರಾಗಿದ್ದಾರೆ. ಅಲ್ಲದೆ, ನವನಗರ ಠಾಣೆಯಲ್ಲಿ ಕಲಂ 143, 341, 307, 354(ಬಿ), 365, 504, 506, 109, 120(ಬಿ) ಹಾಗೂ 149ರಡಿ ತಪ್ಪೆಸ​ಗಿ​ದ್ದಾರೆ. ಸರ್ಕಾರಿ ನೌಕರನಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ದುರ್ನಡತೆ, ಅಶಿಸ್ತು, ನಿರ್ಲ​ಕ್ಷ್ಯ​ತನ ಹಾಗೂ ಬೇಜವಾಬ್ದಾರಿ ಪ್ರದರ್ಶಿಸಿ​ದ್ದಾರೆ. ಹೀಗಾಗಿ ಇಲಾಖೆ ವಿಚಾರಣೆಯನ್ನು ಬಾಕಿಯಿಟ್ಟು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಆದೇಶಿಸಿದ್ದಾರೆ.