ಈ ಪೊಲೀಸ್ ಬಿದ್ದಿದ್ದು ಯೋಗಿ ಕಾಲಿಗಾ? ಸಿಎಂ ಕಾಲಿಗಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Jul 2018, 4:31 PM IST
Cop Kneels, Folds Hands Before Yogi Adityanath READ IN
Highlights

ಸಿಎಂ ಯೋಗಿ ಕಾಲಿಗೆ ಬಿದ್ದ ಪೊಲೀಸ್ ಅಧಿಕಾರಿ

ಸಮವಸ್ತ್ರದಲ್ಲೇ ಯೋಗಿ ಕಾಲಿಗೆ ಬಿದ್ದ ಇನ್ಸಪೆಕ್ಟರ್

ಅಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ನಡೆಗೆ ಆಕ್ರೋಶ

ಗುರು ಪೂರ್ಣಿಮ ಅಂಗವಾಗಿ ಯೋಗಿ ಆರ್ಶೀವಾದ

ಗೋರಖ್‌ಪುರ್(ಜು.28): ಕರ್ತವ್ಯದಲ್ಲಿರುವಾಗಲೇ ಪೊಲೀಸ್‌ ಅಧಿಕಾರಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಅಧಿತ್ಯನಾಥ್‌ ಕಾಲಿಗೆ ಬಿದ್ದ ಘಟನೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದೆ. ಯೋಗಿ ಅವರ ಗೋರಖನಾಥ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲೇ ಯೋಗಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಪ್ರವೀಣ್ ಕುಮಾರ್‌ ಸಿಂಗ್‌ ಎಂಬ ಪೊಲೀಸ್‌ ಅಧಿಕಾರಿ ಯೋಗಿ ಕಾಲಿಗೆ ಬಿದ್ದಿದ್ದು, ಯೋಗಿ ಆದಿತ್ಯನಾಥ್‌ ಮುಂದೆ ಕೈ ಕಟ್ಟಿ ನಿಂತಿರುವ ಫೋಟೋಗಳನ್ನು ಸ್ವತಃ ಅಧಿಕಾರಿಯೇ ಫೆಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಯೋಗಿ ಆದಿತ್ಯನಾಥ್‌ ಅವರಿಗೆ ಹೂಹಾರ ಹಾಕಿ ತಿಲಕವಿಡುವ ಫೋಟೋ ಕೂಡ ವೈರಲ್ ಆಗಿದೆ.

ಗೋರಖ್‌ನಾಥ್ ಸರ್ಕಲ್‌ ಇನ್ಸಪೆಕ್ಟರ್ ಆಗಿರುವ ಪ್ರವೀಣ್‌, ಗುರು ಪೂರ್ಣಿಮ ಅಂಗವಾಗಿ ಯೋಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದು “feeling blessed” ಎಂದು ಬರೆದುಕೊಂಡಿದ್ದಾರೆ. ಸಮವಸ್ತ್ರದಲ್ಲಿರುವ ಅಧಿಕಾರಿ ತಮ್ಮ ಕಾಲಿಗೆ ಬೀಳಲು ಸಿಎಂ ಅವಕಾಶ ಮಾಡಿಕೊಟ್ಟಿದ್ದು ಸರಿಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. 

ಇದೇ ವೇಳೆ ಕೆಲವರು ಪ್ರವೀಣ್ ನಡೆಯನ್ನು ಮೆಚ್ಚಿಕೊಂಡಿದ್ದು, ಸಮವಸ್ತ್ರ ಧರಿಸಿದವರು ಭಕ್ತಿ ಪ್ರದರ್ಶನ ಮಾಡಬಾರದೇ ಎಂದು ಮರು ಪ್ರಶ್ನೆ ಹಾಕಿದ್ಧಾರೆ. ಪೊಲೀಸ್ ಅಧಿಕಾರಿ ಪ್ರವೀಣ್ ಉತ್ತರಪ್ರದೇಶದ ಸಿಎಂ ಕಾಲಿಗೆ ಬಿದ್ದಿಲ್ಲ, ಬದಲಿಗೆ ಯೋಗಿಯೊಬ್ಬರ ಕಾಲಿಗೆ ಬಿದ್ದಿದ್ದಾರೆ ಎಂದು ಕೆಲವರು ಸಮರ್ಥನೆ ನೀಡಿದ್ದಾರೆ.

loader