ವಿವಾಹವಾದ ಬಳಿಕ ಮೊದಲ ರಾತ್ರಿ ಆರೋಪಿ ಪತ್ನಿಗೆ ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದ. ಪತ್ನಿಗೆ ಮತ್ತು ಏರಿದ ಬಳಿಕ ಮೃಗೀಯ ರೀತಿಯಲ್ಲಿ ಆಕೆ ಮೇಲೆ ಎರಗಿ ವಿಕೃತವಾಗಿ ಲೈಂಗಿಕ ಹಿಂಸೆ ನೀಡಿದ್ದ. ಇದಾದ ಬಳಿಕ ಮಹಿಳೆ ಆರೋಪಿಯೊಂದಿಗೆ ಸಂಸಾರ ನಡೆಸುತ್ತಿದ್ದರು. ನಿತ್ಯ ರಾತ್ರಿ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿರುವ ನಗ್ನ ಚಿತ್ರಗಳನ್ನು ಬಲವಂತವಾಗಿ ತೋರಿಸಿ ಅದರಂತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದರು.

ಬೆಂಗಳೂರು(ಆ.01): ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರನ್ವಯ ಪತಿ ಶ್ರೇಯಸ್(36) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಶ್ರೇಯಸ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಕಳೆದ ವರ್ಷ ಏಪ್ರಿಲ್‌ನಲ್ಲಿ ಮಹಿಳೆ ಜತೆ ವಿವಾಹವಾಗಿತ್ತು. ಆರೋಪಿಗೆ ನಾಲ್ಕು ಲಕ್ಷ ರುಪಾಯಿ ವರದಕ್ಷಿಣೆ, ಒಂದು ಲಕ್ಷ ಚಿನ್ನಾಭರಣ ಸೇರಿದಂತೆ 12 ಲಕ್ಷ ರೂ. ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ದಂಪತಿ ಚಾಮರಾಜಪೇಟೆಯಲ್ಲಿ ವಾಸವಿದ್ದರು.

ವಿವಾಹವಾದ ಬಳಿಕ ಮೊದಲ ರಾತ್ರಿ ಆರೋಪಿ ಪತ್ನಿಗೆ ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದ. ಪತ್ನಿಗೆ ಮತ್ತು ಏರಿದ ಬಳಿಕ ಮೃಗೀಯ ರೀತಿಯಲ್ಲಿ ಆಕೆ ಮೇಲೆ ಎರಗಿ ವಿಕೃತವಾಗಿ ಲೈಂಗಿಕ ಹಿಂಸೆ ನೀಡಿದ್ದ. ಇದಾದ ಬಳಿಕ ಮಹಿಳೆ ಆರೋಪಿಯೊಂದಿಗೆ ಸಂಸಾರ ನಡೆಸುತ್ತಿದ್ದರು. ನಿತ್ಯ ರಾತ್ರಿ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿರುವ ನಗ್ನ ಚಿತ್ರಗಳನ್ನು ಬಲವಂತವಾಗಿ ತೋರಿಸಿ ಅದರಂತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದರು.

ಅವರಿಗೆ ಲೈಂಗಿಕ ಕ್ರಿಯೆ ನಡೆಸುವ ಶಕ್ತಿ ಇಲ್ಲ. ವಿಡಿಯೋದಲ್ಲಿರುವಂತೆ ಲೈಂಗಿಕ ಕ್ರಿಯೆ ತರಹ ನಡೆಸುವಂತೆ ಒತ್ತಡ ಹೇರುತ್ತಿದ್ದರು. ಇದರಿಂದ ಸಾಕಷ್ಟು ಮುಜಗುರವಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯ ವರ್ತನೆ ತೋರುತ್ತಿದ್ದರು. ಈ ವಿಚಾರವನ್ನು ನನ್ನ ಪೋಷಕರಿಗೂ ತಿಳಿಸಿದ್ದೆ. ಅವರ ಗಮನಕ್ಕೂ ತಂದಿದ್ದೇನೆ. ನಾನು ಹೇಳಿದಂತೆ ಕೇಳದಿದ್ದರೆ ಮದುವೆಯ ಮೊದಲ ರಾತ್ರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೆದರಿಸುತ್ತಿದ್ದರು. ಹೀಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಕಿರುಕುಳ ಸಹಿಸಲು ಸಾಧ್ಯವಾಗದೆ ದೂರು ನೀಡುತ್ತಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.