ಹುಡುಗಿಯರ ಶೋಕಿಗಾಗಿ ಮಾಡಬಾರದ್ದನ್ನು ಮಾಡುತ್ತಿದ್ದ

ಬೆಂಗಳೂರು(ಡಿ.30): ಓಎಲ್​ಎಕ್ಸ್​ನಲ್ಲಿ ಜಾಹೀರಾತು ನೀಡುವ ಮುನ್ನ ಎಚ್ಚರವಾಗಿರಿ. ಸ್ವಲ್ಪ ಯಾಮಾರಿದ್ರೂ ವಾಹನ ಕೊಳ್ಳುವ ನೆಪದಲ್ಲಿ ಉಂಡೆನಾಮ ಹಾಕ್ತಾರೆ ಹುಷಾರ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲೊಬ್ಬ ಭೂಪ ಹುಡುಗಿಯರ ಶೋಕಿಗಾಗಿ ಓಎಲ್'ಎಕ್ಸ್'ನಲ್ಲಿ ಬೈಕ್ ಮಾರಾಟದ ಜಾಹೀರಾತು ನೋಡಿ ಮಾಲೀಕರ ಬಳಿ ಬಂದು ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಬೈಕ್'ಗಳನ್ನು ಕದ್ದು ಪರಾರಿಯಾಗುತ್ತಿದ್ದ. ಈ ಖತರ್ನಾಗ್ ಕಳ್ಳ ಹಾಸನ ಮೂಲದ ಪುನೀತ್ ಎಂಬುವನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿ 3 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನ, 3 ಮೊಬೈಲ್​ ವಶಕ್ಕೆ ಪಡೆದಿದ್ದಾರೆ.