ಪಾನಮತ್ತರಾಗಿದ್ದ ಯುವಕರು ಯುವತಿ ಅಣ್ಣನ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದರು
ಬೆಂಗಳೂರು(ಆ.12): ಯುವತಿ ಕಿಡ್ನಾಪ್ ಮಾಡಿದ 30 ನಿಮಿಷದಲ್ಲಿಯೇ ಪೊಲೀಸ್ ಪ್ರಕರಣ ಭೇದಿಸಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಮೂವರು ಯುವಕರು ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಿ, ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದರು. ಚಿತ್ರದುರ್ಗ ಮೂಲದ ಯುವತಿ ತನ್ನ ದೊಡ್ಡಪ್ಪನ ಮಗನ ಜೊತೆ ಬೆಂಗಳೂರಿಗೆ ಬಂದಿದ್ದಳು. ಹುಸ್ಕೂರು ಬಳಿಯ ಸಂಬಂಧಿ ಮನೆಯಿಂದ ಚಿತ್ರದುರ್ಗಕ್ಕೆ ತೆರಳಲು ಯಂಶವಂತಪುರ ರೈಲೈ ನಿಲ್ದಾಣಕ್ಕೆ ಅಣ್ಣನ ಜತೆ ಬಂದಿದ್ದಳು. ಪಾನಮತ್ತರಾಗಿದ್ದ ಯುವಕರು ಯುವತಿ ಅಣ್ಣನ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದರು.
ಯುವತಿ ಅಣ್ಣ ರಾಜೀವ್ ಅಲ್ಲೇ ಇದ್ದ ಆಟೋ ಚಾಲಕರ ಸಹಾಯದಿಂದ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಯಶವಂತ ಪುರ ಬಳಿಯ ಟ್ರಾವೇಲ್ಸ್ ಗೋಡಾನ್ನಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ವೇಳೆ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಮೂರು ಆರೋಪಿಗಳಲ್ಲಿ ಫಯಾಜ್ ಮಾತ್ರ ಬಂಧಿತನಾಗಿದ್ದು, ಇನ್ನಿಬ್ಬರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಐಪಿಸಿ ಸೆಕ್ಷನ್ 354 ಮತ್ತು 363 ರ ಅಡಿಯಲ್ಲಿ ಎಪ್ ಐಆರ್ ಪ್ರಕರಣ ದಾಖಲಾಗಿದ್ದು, ಇನ್ನಿಬ್ಬರಿಗೆ ಹುಡುಕಾಟ ನಡೆಯುತ್ತಿದೆ. ಆಟೋ ಡೈವರ್ ಮತ್ತು ಯುವತಿ ಅಣ್ಣನ ಮಾಹಿತಿ ಮೇರೆಗೆ ಒಬ್ಬ ಆರೋಪಿ ಬಂಧಿಸಲು ಸಾಧ್ಯವಾಯಿತು ಎಂದು ಪೊಲೀಸ್ರು ಮಾಹಿತಿ ನೀಡಿದರು.
