ಬೆಂಗಳೂರು[ಆ.30]: ಮಹಾಮಳೆಯಿಂದ ತತ್ತರಿಸಿದ ಕೊಡಗಿನ ನೆರವಿಗೆ ನಿಂತಿದ್ದ ನಿಮ್ಮ ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್ .ಕಾಂ ತಂಡಕ್ಕೆ  ಅಭಿಮಾನಿಗಳು ವಿಶೇಷವಾಗಿ ಥ್ಯಾಂಕ್ಸ್ ಹೇಳಿ ರ‍್ಯಾಪ್ ಸಾಂಗ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಕೊಡಗಿನ ಗಗನ್ ಹಾಗೂ ಯಕ್ಷಿತ್ ಎನ್ನುವ ವಿದ್ಯಾರ್ಥಿಗಳಿಂದ ರ‍್ಯಾಪ್ ಸಾಂಗ್ ಮಾಡಿ ಟ್ರ್ಯಾಪರ್ಸ್ ತಂಡ ಹಾಡಿನ ಸಂಯೋಜನೆ ಮಾಡಿದ್ದಾರೆ. ಪರಿಹಾರ ದೊರಕಿದವರ ಬಾಳು ಮತ್ತೆ ಹಸನಾದರೆ ಅದೊಂದು ರೀತಿಯ ಅದ್ಭುತ ಧನ್ಯತಾ ಭಾವ. ಅಭಿನಂದನೆಗಳು ಎಂದು ಈ ರ‍್ಯಾಪ್  ಸಾಂಗ್ ಮಾಡಿದ ತಂಡಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡ ಟ್ವೀಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

"

ಕೊಡಗಿನ ಪ್ರವಾಹಕ್ಕೊಳಗಾದ ಪ್ರದೇಶಗಳಿಗೆ ಪರಿಹಾರ ಸಾಮಗ್ರಿ ನೀಡಲು  ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್ .ಕಾಂ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿತ್ತು. ಮಧ್ಯಮದ ಸ್ಪಂದನೆಗೆ ರಾಜ್ಯದ ಜನತೆ ಕೊಟ್ಯಂತರ ರೂ. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಚೇರಿಗೆ ಬಂದು ತಲುಪಿಸಿದ್ದರು. ಸ್ವಯಂ ಸೇವಾ ಸಂಘದ ಸಹಕಾರದೊಂದಿಗೆ 32 ಟನ್ ಪರಿಹಾರ ಸಾಮಗ್ರಿಗಳನ್ನು ಕಾಫಿ ನಾಡಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಸುವರ್ಣ ನ್ಯೂಸ್ ತಲುಪಿಸಿತ್ತು.