ಬಿಹಾರದ ಬಿಜೆಪಿ ಮುಖಂಡ ಸುಶೀಲ್ ಮೋದಿ ಕಳೆದ ಕೆಲ ಸಮಯದಿಂದ ಲಾಲೂ ಯಾದವ್ ಹಾಗೂ ಅವರ ಕುಟುಂಬದ ಮೇಲೆ ಹಗರಣ ಮಾಡಿರುವುದಾಗಿ ಆರೋಪಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರು ಆರ್'ಜೆಡಿ ಕೆಂಗಣ್ಣಿಗೀಡಾಗಿದ್ದರು. ಆದರೆ ಇದೀಗ ಈ ವಿಚಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್'ವರೆಗೆ ತಲುಪಿದೆ. ಗುರುವಾರದಂದು ಮತ್ತೊಂದು ಬಾರಿ ಬಿಜೆಪಿ ನಾಯಕ ಸುಶೀಲ್ ಮೋದಿ ಬಿಹಾರ ುಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಆದರೆ ಈ ಬಾರಿ ಅವರ ಮಾತುಗಳೂ ಭಾರೀ ವಿವಾದ ಸೃಷ್ಟಿಸಿವೆ.
ಬಿಹಾರ(ಜು.14): ಬಿಹಾರದ ಬಿಜೆಪಿ ಮುಖಂಡ ಸುಶೀಲ್ ಮೋದಿ ಕಳೆದ ಕೆಲ ಸಮಯದಿಂದ ಲಾಲೂ ಯಾದವ್ ಹಾಗೂ ಅವರ ಕುಟುಂಬದ ಮೇಲೆ ಹಗರಣ ಮಾಡಿರುವುದಾಗಿ ಆರೋಪಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರು ಆರ್'ಜೆಡಿ ಕೆಂಗಣ್ಣಿಗೀಡಾಗಿದ್ದರು. ಆದರೆ ಇದೀಗ ಈ ವಿಚಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್'ವರೆಗೆ ತಲುಪಿದೆ. ಗುರುವಾರದಂದು ಮತ್ತೊಂದು ಬಾರಿ ಬಿಜೆಪಿ ನಾಯಕ ಸುಶೀಲ್ ಮೋದಿ ಬಿಹಾರ ುಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಆದರೆ ಈ ಬಾರಿ ಅವರ ಮಾತುಗಳೂ ಭಾರೀ ವಿವಾದ ಸೃಷ್ಟಿಸಿವೆ.
ವಾಸ್ತವವಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಲಾಲೂ ಯಾದವ್ ಹಾಗೂ ಪುತ್ರ ತೇಜಸ್ವಿ ಯಾದವ್ 'ಏನೇ ಆದರೂ ನಾಣು ಮಾತ್ರ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಯಾಕೆಂದರೆ ಭ್ರಷ್ಟಾಚಾರ ನಡೆದ ಸಂದರ್ಭದಲ್ಲಿ ನಾನು 13/14 ವರ್ಷದವನಾಗಿದ್ದೆ. ಆಗ ನನಗಿನ್ನೂ ಗಡ್ಡ, ಮೀಸೆ ಚಿಗುರಿರಲಿಲ್ಲ. ನಮ್ಮ ಪಕ್ಷವೂ ಈ ಪ್ರಕರಣಕ್ಕೆ ತಲೆಬಾಗುವುದಿಲ್ಲ. ಅಗತ್ಯ ಬಿದ್ದರೆ ಜನರ ಮುಂದೆ ನಾವೇ ಹೋಗುತ್ತೇವೆ' ಎಂದು ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದರು.
ಇವರ ಈ ಹೇಳಿಕೆಗೆ ಟ್ವಿಟರ್'ನಲ್ಲಿ ಉತ್ತರಿಸಿದ ಸುಶೀಲ್ ಮೋದಿ 'ಮೀಸೆ ಚಿಗುರದವನು ನಿರ್ಭಯಾಳಂತ ಯುವತಿಯನ್ನು ಕ್ರೂರವಾಗಿ ಅತ್ಯಾಚಾರ ಮಾಡಿದ್ದಾನೆಂದಾದರೆ, ದಾಖಲೆಗಳನ್ನು ಬದಲಿಸಿ ಭ್ರಷ್ಟಾಚಾರ ಎಸಗಲು ಏಕೆ ಸಾಧ್ಯವಿಲ್ಲ?' ಎಂದಿದ್ದಾರೆ. ಇಷ್ಟೇ ಅಲ್ಲದೆ 'ತೇಜಸ್ವಿಯನ್ನು ಬಿಜೆಪಿಯಲ್ಲ, ಬದಲಾಗಿ ಲಾಲೂ ಪ್ರಸಾದ್ ಭ್ರಷ್ಟಾಚಾರದಲ್ಲಿ ಸೇರಿಸಿಕೊಂಡು ಸಂಕಷ್ಟಕ್ಕೀಡು ಮಾಡಿದ್ದಾರೆ. ತೇಜಸ್ವಿ ಮೊದಲು 1000 ಕೋಟಿಯ ಬೇನಾಮಿ ಆಸ್ತಿ ಹೊಂದಿರುವ ಆರೋಪವನ್ನು ತಳ್ಳಿ ಹಾಕಿದರು ಬಳಿಕ ಸೇಡಿಗಾಗಿ ತನ್ನನ್ನು ಈ ಆರೋಪದಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಲಾರಂಭಿಸಿದರು. ಬಳಿಕ ನಾನು ಆಗ ಅಪ್ರಾಪ್ತನಾಗಿದ್ದೆ ಎಂಬ ಹೇಳಿಕೆ ನೀಡಿದ್ದಾರೆ. ಇವರ ಈ ಅಪ್ರಾಪ್ತ ಎಂಬ ಸುಳ್ಳು ತುಂಬಾ ಹಾಸ್ಯಾಸ್ಪದವಾಗಿದೆ' ಎಂದಿದ್ದಾರೆ.
ಸದ್ಯ ಬಿಜೆಪಿ ನಾಯಕನ ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
