ಈ ಚುನಾವಣೆ ಅಲ್ಲಾ-ರಾಮನ ನಡುವಿನ ಸಮರ: ಬಿಜೆಪಿ ಶಾಸಕನಿಂದ ವಿವಾದದ ಕಿಡಿ

Controversial Statement By BJP MLA
Highlights

"ಮುಂದಿನ ಚುನಾವಣೆ ಅಲ್ಲಾ - ರಾಮನ ಸಮರ" ಎಂದು  ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರು (ಜ.23): "ಮುಂದಿನ ಚುನಾವಣೆ ಅಲ್ಲಾ - ರಾಮನ ಸಮರ" ಎಂದು  ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಂದಿನ ಚುನಾವಣೆ ಅಲ್ಲಾಹ್  ಹಾಗೂ ರಾಮನ ನಡುವೆ ನಡೆಯುವ ಸಮರ. ಬಂಟ್ವಾಳದಲ್ಲಿ ರಮಾನಾಥ್ ರೈ ಮತ್ತು ರಾಜೇಶ್ ನಾಯ್ಕ್ ನಡುವೆ ಸ್ಪರ್ಧೆ ಅಲ್ಲ. ನಿಮಗೆ ರಾಮ ಬೇಕೋ? ಅಲ್ಲಾ ಬೇಕೋ? ನೀವೇ ತೀರ್ಮಾನ ಮಾಡಿ.  ಅಲ್ಲಾನನ್ನ ಗೆಲ್ಲಿಸ್ತೀರಾ ಅಥವಾ ರಾಮನನ್ನು ಪ್ರೀತಿಸೋ ವ್ಯಕ್ತಿಯನ್ನು ಗೆಲ್ಲಿಸ್ತೀರಾ ಎಂದು ವಿವಾದದ ಕಿಡಿ ಹಚ್ಚಿದ್ದಾರೆ.

ಹಿಂದೂಗಳ ಸ್ವಾಭಿಮಾನದ ಪ್ರಶ್ನೆ ಈ ಚುನಾವಣೆ. ಈ ಕ್ಷೇತ್ರದಿಂದ 6 ಬಾರಿ ಆಯ್ಕೆಯಾಗಿರುವ ಶಾಸಕರು ನಾನು ಅಲ್ಲಾನ ಕೃಪೆಯಿಂದ ಯ್ಕೆಯಾಗಿದ್ದೆ ಅಂತಾರೆ. 6 ಬಾರಿ ಗೆದ್ದ ವ್ಯಕ್ತಿ ನಮಗೆ ಹಿಂದೂಗಳ ಮತ ಬೇಡ ಅಂತಾರೆ ಅಂದರೆ ನಮಗೆ ಮರ್ಯಾದೆ ಪ್ರಶ್ನೆ ಇದು. ಯಾರನ್ನು ಗೆಲ್ಲಿಸಬೇಕು ಎಂಬುದು ಬಂಟ್ವಾಳದ ಪ್ರಶ್ನೆ ಅಲ್ಲ. ಇಡೀ ಜಿಲ್ಲೆಯ ಪ್ರಶ್ನೆ.  

loader