ವರ್ಣಬೇಧ ನೀತಿ ಇನ್ನೂ ಹೋಗಿಲ್ಲ ಎಂಬುದಕ್ಕೆ ಸಾಕ್ಷಿ ಈ ವಿಡಿಯೋಪುಟ್ಟ ಮಕ್ಕಳನ್ನೂ ಭಾಧಿಸುತ್ತಿದೆ ಈ ಅನಿಷ್ಟ ಪದ್ದತಿಶ್ವೇತ ವರ್ಣದ ಮಕ್ಕಳೊಂದಿಗೆ ಆಟವಾಡಲು ನಿರಾಕರಣೆಪಾರ್ಕ್‌ನಲ್ಲಿ ತಾಯಿ-ಮಗು ದೂರ ಮಾಡಿದ ವರ್ಣಬೇಧ ಎಂಬ ವಿಷ

ಬಿಲ್ಬಾವೋ(ಜೂ.8): ವರ್ಣಬೇಧ ನೀತಿ ವಿರುದ್ದದ ಹೋರಾಟ ಇಂದು ನಿನ್ನೆಯದಲ್ಲ. ಮಹಾತ್ಮಾ ಗಾಂಧಿ ಅವರಿಂದ ಹಿಡಿದು ನೆಲ್ಸನ್ ಮಂಡೇಲಾವರೆಗೂ ಜಗತ್ತಿನ ಪ್ರಮುಖರೆಲ್ಲರೂ ಈ ಅನಿಷ್ಟ ಪದ್ದತಿಯ ವಿರುದ್ದ ತಮ್ಮ ಧ್ವನಿ ಎತ್ತಿದವರೇ. ಆದರೆ ಇಷ್ಟೆಲ್ಲಾ ಹೋರಾಟಗಳ ನಂತರವೂ ಜಗತ್ತಿನಿಂದ ವರ್ಣಭೇಧ ನೀತಿಯನ್ನು ಹೋಗಲಾಡಿಸಲು ಇನ್ನೂ ಸಾಧ್ಯವಾಗಿಲ್ಲ.

ಇನ್ನು ಈ ವರ್ಣಭೇಧ ನೀತಿ ಪುಟ್ಟ ಮಕ್ಕಳನ್ನೂ ಬಿಟ್ಟಿಲ್ಲ ಎಂಬುದು ಖೇದಕರ ಸಂಗತಿ. ಏನೂ ಅರಿಯದ ಪುಟ್ಟ ಕಂದಮ್ಮಗಳ ಮನಸ್ಸಲ್ಲಿ ವರ್ಣಭೇಧ, ಜನಾಂಗ ದ್ವೇಷವನ್ನು ಬಿತ್ತುತ್ತಿರುವ ಈ ವ್ಯವಸ್ಥೆಗೆ ಧಿಕ್ಕಾರ ಹೇಳಲೇಬೇಕಿದೆ. ಜಗತ್ತಿನ ಎಲ್ಲ ಭಾಗಗಳಲ್ಲಿ ಈ ವರ್ಣಬೇಧ ನೀತಿ ಹೇಗೆ ಇನ್ನೂ ಜೀವಂತವಾಗಿದೆ ಮತ್ತು ಅದು ಮಕ್ಕಳನ್ನೂ ಹೇಗೆ ಭಾಧಿಸುತ್ತಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. 

ಜತೆ ಜತೆಯಾಗಿ ಆಡುವ ಮಕ್ಕಳೇ, ಮಗು ಕಪ್ಪೆಂದು ದೂರ ಮಾಡಿದ ಘಟನೆ ಸ್ಪೇನ್ ನ ಬಿಲ್ಬಾವೋ ನಗರದಲ್ಲಿ ನಡೆದಿದೆ. ಶ್ವೇತ ವರ್ಣದ ಮಕ್ಕಳೊಂದಿಗೆ ಆಡಲು ತೆರಳಿದ ಮಗುವೊಂದನ್ನು ತಮ್ಮೊಟ್ಟಿಗೆ ಆಟಕ್ಕೆ ಸೇರಿಸಿಕೊಳ್ಳದ ಮಕ್ಕಳು ಅಮಾನವೀಯವಾಗಿ ವರ್ತಿಸಿವೆ.

ಕಪ್ಪು ವರ್ಣದ ಮಗುವಿನೊಂದಿಗೆ ಪಾರ್ಕ್‌ಗೆ ಬಂದ ತಾಯಿ, ತನ್ನ ಮಗುವಿಗೆ ಆಟವಾಡಿಸಲು ಸಾಕಷ್ಟು ಕಸರತ್ತು ಪಟ್ಟಿದ್ದಾಳೆ. ಯಾವುದೇ ಆಟಕ್ಕೆ ಕರೆದುಕೊಂಡು ಹೋದರೂ, ಅಲ್ಲಿರುವ ಶ್ವೇತ ವರ್ಣದ ಮಕ್ಕಳು ಇಬ್ಬರನ್ನೂ ದೂರ ತಳ್ಳುತ್ತಿರುವ ವಿಡಿಯೋ ಎಂತಹವರ ಕಣ್ಣಲ್ಲೂ ನೀರು ತರಿಸುತ್ತದೆ.