ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಬೀದರ್‌'ನ ಚಾಂದೋರಿ ಮತ್ತು ತೋಣರ್ ಗ್ರಾಮದ ರಸ್ತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಕಿಲೋ ಮೀಟರ್‌ಗೆ ಒಂದು ಕೋಟೆಯಂತೆ, 6 ಕಿಲೋ ಮೀಟರ್‌ಗೆ 6.68 ಕೋಟಿ ಖರ್ಚು ಮಾಡಿ, ರಸ್ತೆಗೆ ಟಾರು ಹಾಕಲಾಗ್ತಿದೆ.. ಆದ್ರೆ ಕಲಬುರಗಿ ಮೂಲದ ಗುತ್ತಿಗೆದಾರ ರವಿಶಂಕರ್ ಅಧಿಕಾರಿಗಳ ಜೊತೆ ಶಾಮೀಲಾಗಿ ಕಳಪೆ ಗುಣಮಟ್ಟದ ಟಾರು ಹಾಕಿ ಹೇಗೆ ಸರ್ಕಾರದ ಹಣನ್ನು ನುಂಗಿ ಹಾಕುತ್ತಿದ್ದಾರೆ ಎನ್ನುವುದಕ್ಕೆ ತಾಜಾ ಉದಾಹರಣೆಯೇ ಇಲ್ಲಿನ ರಸ್ತೆ.

ಬೀದರ್(ನ.25): ಇದು ಸುವರ್ಣನ್ಯೂಸ್ ಬಯಲಿಗೆಳೆಯುತ್ತಿರುವ ಕುಗ್ರಾಮದ ಕೋಟಿ ಲೆಕ್ಕಾಚಾರದ ಕರ್ಮಕಾಂಡ. ರಸ್ತೆ ಕಾಮಗಾರಿಯ ಅವಧಿ ಮುಗಿದು ಮೂರು ವರ್ಷವಾಗಿದೆ. ಆದರೆ ಕಾಮಗಾರಿ ಈಗ ಶುರುವಾಗಿದೆ. 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಕಲಿ ರಸ್ತೆಯ ಅಸಲಿಯತ್ತಿದು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಬೀದರ್‌'ನ ಚಾಂದೋರಿ ಮತ್ತು ತೋಣರ್ ಗ್ರಾಮದ ರಸ್ತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಕಿಲೋ ಮೀಟರ್‌ಗೆ ಒಂದು ಕೋಟೆಯಂತೆ, 6 ಕಿಲೋ ಮೀಟರ್‌ಗೆ 6.68 ಕೋಟಿ ಖರ್ಚು ಮಾಡಿ, ರಸ್ತೆಗೆ ಟಾರು ಹಾಕಲಾಗ್ತಿದೆ.. ಆದ್ರೆ ಕಲಬುರಗಿ ಮೂಲದ ಗುತ್ತಿಗೆದಾರ ರವಿಶಂಕರ್ ಅಧಿಕಾರಿಗಳ ಜೊತೆ ಶಾಮೀಲಾಗಿ ಕಳಪೆ ಗುಣಮಟ್ಟದ ಟಾರು ಹಾಕಿ ಹೇಗೆ ಸರ್ಕಾರದ ಹಣನ್ನು ನುಂಗಿ ಹಾಕುತ್ತಿದ್ದಾರೆ ಎನ್ನುವುದಕ್ಕೆ ತಾಜಾ ಉದಾಹರಣೆಯೇ ಇಲ್ಲಿನ ರಸ್ತೆ.

ಈ ರಸ್ತೆಯನ್ನು ಕಾಂಕ್ರೀಟ್ ಜೊತೆ ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕಿತ್ತು. ಆದರೆ ಇಲ್ಲಿಗೆ ಹಾಕುತ್ತಿದ್ದದ್ದೇ ಬೇರೆ. ಈ ಅಕ್ರಮದ ಸುದ್ದಿ ತಿಳಿದ ಕೂಡಲೇ ಸುವರ್ಣ ನ್ಯೂಸ್'ನ ತಂಡ ಕಳಪೆ ಕಾಮಗಾರಿ ರಹಸ್ಯ ಬಿಚ್ಚಿಡಲು ಸ್ಥಳಕ್ಕೆ ತೆರಳಳಿತು. ಆದರೆ ಈ ಕುರಿತಾದ ಮಾಹಿತಿ ಸಿಕ್ಕ ಕೂಡಲೇ ಗುತ್ತಿಗೆದಾರ ಎಚ್ಚೆತ್ತುಕೊಂಡಿದ್ದು, ಅರ್ಧ ಇಂಚು ಡಾಂಬರೀಕರಣ ಮಾಡುತ್ತಿದ್ದವನು ಏಕಾ ಏಕೀ ಒಂದು ಅಡಿಗೂ ಜಾಸ್ತಿ ಮಾಲು ಹಾಕಿ ರಸ್ತೆ ಮಾಡುತ್ತಿದ್ದೇವೆ ಎಂದು ತೋರಿಸಲು ಮುಂದಾಗಿದ್ದ.

ಈ ಸ್ಥಳದಲ್ಲೇ ಎಂಜಿನಿಯರ್ ಇದ್ದರೂ ನಾಮ ಕೇ ವಾಸ್ತೆ ಮೇಲುಸ್ತುವಾರಿ ಮಾಡುತ್ತಿದ್ದರು. ಒಟ್ಟಾರೆ ಇಂಥ ಬೇಜವಾಬ್ದಾರಿ ಅಧಿಕಾರಿಗಳು, ಲೂಟಿ ಕೋರ ಗುತ್ತಿಗೆದಾರರು ಇರುವವರೆಗೂ ಗ್ರಾಮಗಳಿಗೆ ಗುಣಮಟ್ಟದ ರಸ್ತೆ ಸಂಪರ್ಕ ಸಿಗುವುದು ಅನುಮಾನ. ಕೂಡಲೇ ಸರ್ಕಾರ ಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿ ಎನ್ನುವುದೇ ನಮ್ಮ ಆಶಯ.