ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಇದೀಗ ಹೊಸ ಟ್ವಿಸ್ಟ್ ಒಂದು ದೊರಕಿದೆ. ರಾಮಮಂದಿರ ಜಾಗದಲ್ಲಿ ಬುದ್ಧನ ಮಂದಿರವನ್ನು ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಸಂಸದೆ ಹೇಳಿದ್ದಾರೆ .

ಲಕ್ನೋ :  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಿಜಿಪಿ ಬಹರೇಚ್ ಸಂಸದೆ ಸಾವಿತ್ರಿ ಬಾಯಿ ಪುಲೆ ಅವರು ತಮ್ಮ ಪಕ್ಷವನ್ನು ನಿರಂತರವಾಗಿ ಟೀಕಿಸುತ್ತಾ ಬಂದಿದ್ದು ಇದೀಗ ಅಯೋಧ್ಯೆಯಲ್ಲಿ ಬುದ್ಧನ ಮಂದಿರ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ. 

ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಯ ಮನವಿ ಮಾಡಿದ ಬೆನ್ನಲ್ಲೇ ಸಾವಿತ್ರಿ ಬಾಯಿ ಅವರು ಈ ಹೇಳಿಕೆ ನೀಡಿದ್ದಾರೆ. 

ಅನೇಕ ರೀತಿಯ ಸಂಶೋಧನೆಗಳನ್ನು ಸ್ಥಳದಲ್ಲಿ ನಡೆದ ಪರಿಶೀಲನೆಯಲ್ಲಿ ಈ ಸ್ಥಳ ಬೌದ್ಧ ಧರ್ಮಕ್ಕೆ ಸೇರಿದ ಸ್ಥಳವೆಂದು ತಿಳಿದು ಬಂದಿದೆ. 

ಬೌದ್ಧ ಧರ್ಮ ಒಂದೇ ಜಾತಿ, ಮೇಲು, ಕೀಳು ಎನ್ನುವುದು ಇಲ್ಲದಂತಹ ಉತ್ತಮ ಸೌಹಾರ್ಧತೆಯನ್ನು ಹೊಂದಿರುವಂತದಾಗಿದೆ ಎಂದು ಅವರು ಹೇಳಿದ್ದಾರೆ.