ಗವರ್ನರ್ ವಾಹನಕ್ಕೆ ಟ್ರಾಫಿಕ್ ಕ್ಲೀಯರ್ ಮಾಡಿಕೊಡುವ ಕರ್ತವ್ಯದಲ್ಲಿ ನಿರತರಾಗಿದ್ದಾಗ ಏಕಾಏಕಿ ರಾಜ್ಯಪಾಲರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿತ್ತು. ನಂತರ ಪೇದೆ ರಮೇಶನನ್ನು ಹೆಬ್ಬಾಳದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರು (ಜ.19): ಕಳೆದ ನಾಲ್ಕು ದಿನಗಳ ಹಿಂದೆ ರಾಜ್ಯಪಾಲರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಪೇದೆ ರಮೇಶ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ ರಮೇಶ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಯಲಹಂಕ ಸಂಚಾರಿ ಠಾಣೆಯ ಪೇದೆ ರಮೇಶ್ ಕಳೆದ ನಾಲ್ಕು ದಿನದ ಹಿಂದೆ ಸಂಜೆ ಏಳುವರೆ ಗಂಟೆ ಸುಮಾರಿಗೆ ಬೆಂಗಳೂರಿನ ಯಲಹಂಕದ ಏರ್ಪೋರ್ಟ್ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದರು.
ಗವರ್ನರ್ ವಾಹನಕ್ಕೆ ಟ್ರಾಫಿಕ್ ಕ್ಲೀಯರ್ ಮಾಡಿಕೊಡುವ ಕರ್ತವ್ಯದಲ್ಲಿ ನಿರತರಾಗಿದ್ದಾಗ ಏಕಾಏಕಿ ರಾಜ್ಯಪಾಲರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿತ್ತು. ನಂತರ ಪೇದೆ ರಮೇಶನನ್ನು ಹೆಬ್ಬಾಳದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.