ಮೋದಿ ಪರವಾಗಿ ಸಂದೇಶ ರವಾನೆ : ಪಿಸಿ ಅಮಾನತು

Constable Suspended For PM Modi support
Highlights

ಮೋದಿ ಪರವಾಗಿ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ  ರಾಣೆಬೆನ್ನೂರು ಟೌನ್ ಠಾಣೆಯ ಮುಖ್ಯ ಪೇದೆಯನ್ನು ಅಮಾನತು ಮಾಡಲಾಗಿದೆ.

ಹಾವೇರಿ :ಮೋದಿ ಪರವಾಗಿ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ  ರಾಣೆಬೆನ್ನೂರು ಟೌನ್ ಠಾಣೆಯ ಮುಖ್ಯ ಪೇದೆಯನ್ನು ಅಮಾನತು ಮಾಡಲಾಗಿದೆ.

ಹಾವೇರಿ ಎಸ್ಪಿ ಪರಶುರಾಮ್ ಅವರು ಪೇದೆ ಜಯಂತ್ ಬಳಿಗಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಟೌನ್ ಠಾಣೆಯಲ್ಲಿ ಜಯಂತ್ ಸೇವೆ ಸಲ್ಲಿಸುತ್ತಿದ್ದರು.

ಸಂದೇಶದಲ್ಲಿ ಮೋದಿಯ ಬಗ್ಗೆ ಭಾರತೀಯರು ಹೆಮ್ಮೆ ಪಡಬೇಕು.  ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರ ಸಂಬಂಧ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

ಮೋದಿಯವರನ್ನು ಬೆಂಬಲಿಸಿ. ಅವರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಸಂದೇಶ ರವಾನೆ ಮಾಡಿದ್ದರು. ಈ ನಿಟ್ಟಿನಲ್ಲಿ ಪೇದೆ ಜಯಂತ್’ರನ್ನು ಅಮಾನತು ಮಾಡಲಾಗಿದೆ.

loader