ಭಡ್ತಿ ಸೇರಿದಂತೆ ಪೊಲೀಸರು ಎದುರಿಸುತ್ತಿರುವ ವಿವಿಧ ಸಮಸ್ಯೆ ಬಗೆಹರಿಸುವಂತೆ ಆ ಪೇದೆ ಅಂಗಲಾಚಿದ್ದಾರೆ.
ಬೆಳಗಾವಿ (ಡಿ.01): ಬೆಳಗಾವಿಯ ಕೆಐಡಿಬಿ ತಾತ್ಕಾಲಿಕ ಪೊಲೀಸ್ ವಸತಿ ಸಮುಚ್ಚಯಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ಈ ವೇಳೆ ಪೊಲೀಸ್ ಪೇದೆಯೊಬ್ಬರು, ತಮ್ಮ ಸಂಕಷ್ಟ ತೋಡಿಕೊಂಡು ಗಳಗಳನೆ ಅತ್ತರ ಘಟನೆ ನಡೆದಿದೆ.
2 ಸಾವಿರ ರೂಪಾಯಿ ಸಂಬಳ ಹೆಚ್ಚಳವಾಗಿದೆ. ಇದರಿಂದ ಸಂಸಾರ ನಡೆಸೋದು ಕಷ್ಟ ಎಂದು ಆ ಪೇದೆ ಅಳಲುತೋಡಿಕೊಂಡಿದ್ದಾರೆ.
ಭಡ್ತಿ ಸೇರಿದಂತೆ ಪೊಲೀಸರು ಎದುರಿಸುತ್ತಿರುವ ವಿವಿಧ ಸಮಸ್ಯೆ ಬಗೆಹರಿಸುವಂತೆ ಆ ಪೇದೆ ಅಂಗಲಾಚಿದ್ದಾರೆ.
ಕಾನ್ಸ್ಟೇಬಲ್’ರನ್ನು ಸಮಾಧಾನಪಡಿಸಿದ ಸಚಿವ ಪರಮೇಶ್ವರ್, ಪೊಲೀಸರ ವೇತನ ಹೆಚ್ಚಳ ಸೇರಿದಂತೆ ಎಲ್ಲ ರೀತಿಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.
