ಪ್ರಧಾನಿ ಮೋದಿಗೆ ವ್ಯಾಲಂಟೈನ್ಸ್ ಡೇ ವಿಶ್ ಮಾಡಿದ ಕಾಂಗ್ರೆಸ್

First Published 15, Feb 2018, 8:28 AM IST
Congresss Valentines Day message to PM Modi
Highlights

ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಪಕ್ಷ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದೆ. ಪ್ರೇಮಿಗಳ ದಿನಚರಣೆಯ ವೇಳೆ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ವಿಡಿಯೋ ಒಂದನ್ನ ಅಪ್ ಲೋಡ್ ಮಾಡಿರುವ ಕಾಂಗ್ರೆಸ್ ಪಡೆ. ಮೋದಿಗೆ ಟಾಂಗ್ ಕೊಟ್ಟಿದೆ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಪಕ್ಷ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದೆ. ಪ್ರೇಮಿಗಳ ದಿನಚರಣೆಯ ವೇಳೆ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ವಿಡಿಯೋ ಒಂದನ್ನ ಅಪ್ ಲೋಡ್ ಮಾಡಿರುವ ಕಾಂಗ್ರೆಸ್ ಪಡೆ. ಮೋದಿಗೆ ಟಾಂಗ್ ಕೊಟ್ಟಿದೆ. ಈ ವಿಡಿಯೋದಲ್ಲಿ ‘ಡಿಯರ್ ಮೋದಿಜೀ ನೀವು ಪ್ರೀತಿಯನ್ನು ಹಂಚಿ. ಸುಳ್ಳು ಭರವಸೆಗಳನ್ನಲ್ಲ. ತಬ್ಬಿಕೊಳ್ಳುವುದನ್ನ ಕಡಿಮೆ ಮಾಡಿ.

 ಜಾಸ್ತಿ ಕೆಲಸ ಮಾಡಿ. ಎಲ್ಲಾ ಭಾರತೀಯರನ್ನ ಸಮಾನವಾಗಿ ಪ್ರೀತಿಸಿ. ಸ್ವಲ್ವ ನಮ್ಮ ಮನ್ ಕೀ ಬಾತ್ ಅನ್ನೂ ಆಲಿಸಿ. ಇನ್ನೂ ಪ್ರಮುಖವಾಗಿ ನೀವು ಕೊಟ್ಟ ಭರವಸೆಗಳು, ಮಾತನ್ನ ಉಳಿಸಿಕೊಳ್ಳಿ. ಈ ಬಾರಿ ತುಂಬಾ ಪ್ರೀತಿ’ ಎನ್ನುವ ಮೂಲಕ ಮೋದಿಗೆ ಟಾಂಗ್ ನೀಡಿದೆ ಕಾಂಗ್ರೆಸ್.

 

loader