ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಸಿಲು ಸಿದ್ಧಗೊಳ್ಳುತ್ತಿದ್ದಂತೆಯೇ  ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿ ಪಕ್ಷದಲ್ಲಿ ಬಂಡಾಯದ ಕಹಳೆ ಮೊಳಗಿದೆ. ಕಾಂಗ್ರೆಸ್ ನಾಯಕ  ಹಾಗೂ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಶಹಝಾದ್ ಪೂನವಾಲಾ,  ಪಕ್ಷದ ಅಧ್ಯಕ್ಷ ಹುದ್ದೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯು ದೋಷಪೂರಿತವಾಗಿದ್ದು, ರಾಹುಲ್ ಗಾಂಧಿ ತಕ್ಷಣ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಸಿಲು ಸಿದ್ಧಗೊಳ್ಳುತ್ತಿದ್ದಂತೆಯೇ ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿ ಪಕ್ಷದಲ್ಲಿ ಬಂಡಾಯದ ಕಹಳೆ ಮೊಳಗಿದೆ.

ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಶಹಝಾದ್ ಪೂನವಾಲಾ, ಪಕ್ಷದ ಅಧ್ಯಕ್ಷ ಹುದ್ದೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯು ದೋಷಪೂರಿತವಾಗಿದ್ದು, ರಾಹುಲ್ ಗಾಂಧಿ ತಕ್ಷಣ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ಪಾರದರ್ಶಕವಾಗಿ ನಡೆದರೆ ತಾನು ಕೂಡಾ ಸ್ಪರ್ಧಿಸುವುದಾಗಿ ಪೂನವಾಲ ಹೇಳಿದ್ದಾರೆ. ಈಗ ನಡೆಯುತ್ತಿರುವುದು ಎಲೆಕ್ಷನ್ (ಚುನಾವಣೆ) ಅಲ್ಲ, ಬದಲಾಗಿ ಸೆಲೆಕ್ಷನ್ (ನೇಮಕ)ವಾಗಿದೆ ಎಂದು ಪೂನವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಪಕ್ಷದ) ಅಧ್ಯಕ್ಷೀಯ ಚುನಾವಣೆಗೆ ಮತದಾರರನ್ನು ಪಕ್ಷದ ಸಂವಿಧಾನದ ನಿಯಮಗಳಿಗನುಸಾರವಾಗಿ ಆಯ್ಕೆ ಮಾಡಲಾಗಿಲ್ಲ, ಬದಲಾಗಿ ತಮಗೆ ಬೇಕಾದ ಕೆಲವರನ್ನು ಆಯ್ಕೆಮಾಡಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆದುದರಿಂದ, ನಾನು ಕೂಡಾ ನನ್ನ ಹುದ್ದಗೆ ರಾಜೀನಾಮೆ ನೀಡುತ್ತೇನೆ, ರಾಹುಲ್ ಗಾಂಧಿ ಕೂಡಾ ಪಕ್ಷದ ಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು, ಎಂದು ಪೂನವಾಲಾ ಹೇಳಿದ್ದಾರೆ.

ಅಭ್ಯರ್ಥಿಗಳು ಸಾಮರ್ಥ್ಯದ ಮೇಲೆ ಸ್ಪರ್ಧಿಸಬೇಕೇ ಹೊರತು ಕುಟುಂಬದ ಹೆಸರಿನಿಂದ ಅಲ್ಲ. ಅದಕ್ಕಾಗಿ ಪಕ್ಷದ ಬಗ್ಗೆ ಅಭ್ಯರ್ಥಿಗಳು ಯಾವ ದೂರದೃಷ್ಟಿ ಹೊಂದಿದ್ದಾರೆ, ಅವರವರ ಯೋಜನೆಗಳೇನು ಎಂಬಿತ್ಯಾದಿಗಳ ಬಗ್ಗೆ ಮುಕ್ತ ಚರ್ಚೆಯಾಗಬೇಕು. ಎಂದು ಪೂನವಾಲ ಹೇಳಿದ್ದಾರೆ.