ನಾನು - ಸಿಎಂ ಸಿದ್ದರಾಮಯ್ಯ ಒಂದೇ ಗಾಡಿಯ ನೊಗ ಹೊತ್ತ ಜೋಡಿ ಎತ್ತು ಇದ್ದಂತೆ. ನಾವು ನೊಗ ಹೊತ್ತು ರಾಜ್ಯಾದ್ಯಂತ ಓಡಾಡಿದ್ದೇವೆ. ನಾವಿಬ್ಬರೂ ಅಣ್ಣ ತಮ್ಮಂದಿರಂತೆ, ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಣ್ಣಿಸಿದ್ದಾರೆ.
ಮಧುಗಿರಿ (ಡಿ.18): `ನಾನು- ಸಿಎಂ ಸಿದ್ದರಾಮಯ್ಯ ಒಂದೇ ಗಾಡಿಯ ನೊಗ ಹೊತ್ತ ಜೋಡಿ ಎತ್ತು ಇದ್ದಂತೆ. ನಾವು ನೊಗ ಹೊತ್ತು ರಾಜ್ಯಾದ್ಯಂತ ಓಡಾಡಿದ್ದೇವೆ. ನಾವಿಬ್ಬರೂ ಅಣ್ಣ ತಮ್ಮಂದಿರಂತೆ, ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಣ್ಣಿಸಿದ್ದಾರೆ.
ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಭಾನುವಾರ ಮಧುಗಿರಿ ತಾಲೂಕು ಪುರವರ ಹೋಬಳಿ ಬ್ಯಾಲ್ಯದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. `ಪರಮೇಶ್ವರ್’ಗೂ ಸಿದ್ದರಾಮಯ್ಯಗೂ ಆಗುವುದಿಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ.
ಇದು ಶುದ್ಧ ಸುಳ್ಳು. ಸಿಎಂ ಸಿದ್ದರಾಮಯ್ಯ ಮತ್ತು ನಾನು ಒಗ್ಗೂಡಿ ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ' ಎಂದ ಅವರು, ಯಡಿಯೂರಪ್ಪ- ಈಶ್ವರಪ್ಪ ಬಿಜೆಪಿಯಲ್ಲಿ ಎಂದಿಗೂ ಒಂದಾಗುವುದಿಲ್ಲ.
ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಸಲುವಾಗಿ ಯಾತ್ರೆ ಕೈಗೊಂಡಿದ್ದೇವೆ. ಇಲ್ಲ ಸಲ್ಲದ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು. ವಿರೋಧ ಪಕ್ಷಗಳು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ. ನಾವೆಲ್ಲ ಒಟ್ಟಾಗಿದ್ದೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
